ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: "ದಾವಣಗೆರೆ ಅದೃಷ್ಟದ ಸ್ಥಳ"; ಮಾಜಿ ಸಚಿವ ಎಸ್.ಎಸ್.‌ ಮಲ್ಲಿಕಾರ್ಜುನ್ ಅಭಿಮತ

ದಾವಣಗೆರೆ: ದಾವಣಗೆರೆ ಅದೃಷ್ಟದ ನೆಲ. ಸೋನಿಯಾ ಗಾಂಧಿ ಅವರು ಇಲ್ಲಿಗೆ ಬಂದು ಹೋದ ಮೇಲೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಮನಮೋಹನ್ ಸಿಂಗ್ ಪಿಎಂ ಆದರು. ಎಸ್. ಎಂ. ಕೃಷ್ಣ ಸಹ ಪಾಂಚಜನ್ಯ ಯಾತ್ರೆ ಶುರು ಮಾಡಿದ್ದು ಇಲ್ಲಿಂದಲೇ.‌ ಸಿದ್ದರಾಮಯ್ಯ ಅಹಿಂದ ಸಮಾವೇಶದ ಬಳಿಕ ಸಿಎಂ ಆದರು. ಹಾಗಾಗಿ ಇದು ಅದೃಷ್ಟದ ಜಾಗ ಎಂದು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.

ಜಯದೇವ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ದಾವಣಗೆರೆ ರಾಜಕೀಯ ಇತಿಹಾಸದಲ್ಲಿ ಅದೃಷ್ಟದ ಜಾಗ ಎಂಬ ಕೀರ್ತಿಗೆ ಪಾತ್ರವಾಗಿದೆ. ಆಗಸ್ಟ್ 3 ರಂದು ಸಿದ್ದರಾಮಯ್ಯರ 75ನೇ ವರ್ಷದ ಅಮೃತ ಮಹೋತ್ಸವ ಆಯೋಜಿಸಲಾಗಿದೆ. ಮಧ್ಯಕರ್ನಾಟಕದ ಹೆಬ್ಬಾಗಿಲು ಆದ ಕಾರಣ ಎಲ್ಲಾ ಕಡೆಗಳಿಂದಲೂ ಜನರು ಬರುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಂತ್ರಿ ಮಂಡಲದಲ್ಲಿ ಇದ್ದವರೆಲ್ಲಾ ಸೇರಿ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ ಎಂದರು.

ದಾವಣಗೆರೆಗೆ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ತರಬೇಕಿದೆ. ನಮಗೆ ಸಿದ್ದರಾಮಯ್ಯ ಬೇಕು. ಬಡವರು, ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.‌ ನಾವೆಲ್ಲರೂ ಸೇರಿ ಮೂರನೇ ತಾರೀಖಿನಂದು ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಹೇಳಿದರು.

Edited By : Shivu K
PublicNext

PublicNext

22/07/2022 06:34 pm

Cinque Terre

34.71 K

Cinque Terre

0

ಸಂಬಂಧಿತ ಸುದ್ದಿ