ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಸವದಿ- ಕುಮಠಳ್ಳಿ ಮಧ್ಯೆ ನಡೆಯುತ್ತಿದೆಯಾ ಫೈಟ್; ಕಾಮಗಾರಿ ಶಿಲಾನ್ಯಾಸದಲ್ಲಿ ಶಾಸಕ ಚಕ್ಕರ್

ವರದಿ: ಸಂತೋಷ ಬಡಕಂಬಿ

ಅಥಣಿ: ಎಲ್ಲಿ ನೋಡಿದರಲ್ಲಿ ಫ್ಲೆಕ್ಸ್‌, ಬ್ಯಾನರ್‌ ಗಳು...ಅದರಲ್ಲಿ ಕ್ಷೇತ್ರದ ಶಾಸಕರ ಬದಲಾಗಿ ಮಾಜಿ ಡಿಸಿಎಂ ಹಾಗೂ ಅವರ ಸುಪುತ್ರನ ಪೋಟೊ ರಾರಾಜಿಸುತ್ತಿವೆ! ಅರೇ ಏನಿದು ಅಂತೀರಾ... ಈ ವರದಿ ನಿಮಗಾಗಿ.

ಹೌದು... ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಡಗಿ‌ ಗ್ರಾಮದಲ್ಲಿ 9 ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲು‌ ಸಚಿವ ಮಾಧುಸ್ವಾಮಿಗೆ ಮಾಜಿ‌ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಅವರ ಪುತ್ರ ಚಿದಾನಂದ ಸವದಿ ಸಾಥ್ ನೀಡಿದರು. ಆದರೆ, ಅಥಣಿ‌ ಶಾಸಕ‌ ಮಹೇಶ ಕುಮಠಳ್ಳಿ ಗಾಯಬ್ ಆಗಿದ್ದರು.

ಸ್ವಾಗತ ಫ್ಲೆಕ್ಸ್‌ ನಲ್ಲಿ ಮಹೇಶ ಕುಮಠಳ್ಳಿ ಹೆಸರು ನಾಪತ್ತೆ ಆಗಿದ್ದು ಕಂಡು ಬಂದಿದೆ. ಶಾಸಕರನ್ನು ಸಂಪರ್ಕಿಸಿದರೆ ಪೋನ್ ಸ್ವೀಚ್ ಆಫ್. ಇದರಿಂದ ಕ್ಷೇತ್ರದಲ್ಲಿ ಮತ್ತೆ ಒಡಕಾಗಿದೆಯಾ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಸಚಿವ ಮಾಧುಸ್ವಾಮಿ ಹಾಗೂ ಮಾಜಿ‌ ಡಿಸಿಎಂ ಲಕ್ಷ್ಮಣ ಸವದಿ‌ ನೇತೃತ್ವದಲ್ಲಿ 49.51 ಕೋಟಿ ವೆಚ್ಚದಲ್ಲಿ ಮೊದಲನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಯಿತು.

113 ಕೋಟಿ ವೆಚ್ಚದ 9 ಕೆರೆ ತುಂಬಿಸುವ ಕಾಮಗಾರಿ ಇದಾಗಿದ್ದು, ಇದರಿಂದ ಮಡ್ಡಿ ಭಾಗದ ರೈತರಿಗೆ ಅನುಕೂಲವಾಗಲಿದೆ. ಅಥಣಿಯ ಬ್ಯಾಡಗಿ ಗ್ರಾಮದಲ್ಲಿ ಚಾಲನೆ ನೀಡಲಾಗಿದ್ದು, ಲಕ್ಷ್ಮಣ ಸವದಿ ತಂದಿರುವ ನೀರಾವರಿ ಯೋಜನೆಗೆ ಮಹೇಶ ಕುಮಠಳ್ಳಿ ಗೈರಾಗಿರುವ ಬಗ್ಗೆ ಸಚಿವ ಮಾಧುಸ್ವಾಮಿ ಹೇಳೋದು ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಮಹೇಶ ಕುಮಠಳ್ಳಿ ಬೆಂಗಳೂರಿನಲ್ಲಿದ್ದಾರೆ ಅಂತ.

ಆದರೆ, ಬೆಂಗಳೂರಿನಿಂದ ಅಥಣಿಗೆ ಲಕ್ಷ್ಮಣ ಸವದಿ ಹಾಗೂ ಮಾಧುಸ್ವಾಮಿ ಬರುವಾಗ ಇವರ ಜೊತೆ ಮಹೇಶ ಕುಮಠಳ್ಳಿ ಬರಬಹುದಿತ್ತು. ಮಹೇಶ್ ಸ್ವಕ್ಷೇತ್ರದ ಪ್ರಮುಖ ಕಾರ್ಯಕ್ರಮಕ್ಕೆ  ಬಾರದಿರುವುದು ಅಥಣಿ ಕ್ಷೇತ್ರದಲ್ಲಿ ವೈಮನಸ್ಸು ಪ್ರಾರಂಭವಾಯಿತಾ? ಎಂದು ಕ್ಷೇತ್ರದ ಜನರು ಪ್ರಶ್ನಿಸುವಂತಾಗಿದೆ.

Edited By : Nagesh Gaonkar
PublicNext

PublicNext

17/07/2022 10:49 pm

Cinque Terre

89.09 K

Cinque Terre

1

ಸಂಬಂಧಿತ ಸುದ್ದಿ