ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜಪಕ್ಸ ರಾಜೀನಾಮೆ

ಕೊಲಂಬೊ: ಗೊಟಬಯ ರಾಜಪಕ್ಸ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಲಾಗಿದೆ ಎಂದು ಶ್ರೀಲಂಕಾ ಸಂಸತ್ತಿನ ಸ್ವೀಕರ್ ಕಚೇರಿ ದೃಢಪಡಿಸಿದೆ.

ಕೊಲಂಬೋದಿಂದ ಸಿಂಗಾಪುರ್ ತಲುಪಿರುವ ಗೊಟಬಯ, ಶ್ರೀಲಂಕಾ ತೊರೆಯುವ ಹೊತ್ತಲ್ಲಿ ತಾನು ಬುಧವಾರ ರಾತ್ರಿಯೊಳಗೆ ರಾಜೀನಾಮೆ ಪತ್ರ ಕಳುಹಿಸುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ರಾಜೀನಾಮೆ ಪತ್ರ ಸಿಕ್ಕಿಲ್ಲ ಎಂದು ಗುರುವಾರ ಬೆಳಗ್ಗೆ ಸ್ಪೀಕರ್ ಹೇಳಿದ್ದರು. ಏತನ್ಮಧ್ಯೆ ಗುರುವಾರ ಸಂಜೆ ಗೊಟಬಯ ಅವರ ರಾಜೀನಾಮೆ ಪತ್ರ ಶ್ರೀಲಂಕಾ ಸಂಸತ್ ಗೆ ತಲುಪಿರುವುದಾಗಿ ಶ್ರೀಲಂಕಾದ ಸ್ಪೀಕರ್ ಕಚೇರಿ ಹೇಳಿದೆ. ಸಿಂಗಾಪುರದಿಂದಲೇ ಶ್ರೀಲಂಕಾ ಅಧ್ಯಕ್ಷರು ಸಂಸತ್ ಸ್ಪೀಕರ್ ಗೆ ರಾಜೀನಾಮೆ ಪತ್ರವನ್ನು ಇಮೇಲ್ ಮೂಲಕ ಕಳುಹಿಸಿದ್ದಾರೆ ಎನ್ನಲಾಗಿದ್ದರೂ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸಾಂವಿಧಾನಿಕ ಪ್ರಕ್ರಿಯೆಗಳು ಮುಗಿದ ನಂತರವೇ ರಾಜಪಕ್ಸ ಅವರ ರಾಜೀನಾಮೆ ಘೋಷಣೆ ಮಾಡಲಾಗುವುದು ಎಂದು ಸ್ಪೀಕರ್ ಕಚೇರಿ ಮೂಲಗಳು ಹೇಳಿವೆ.

Edited By : Vijay Kumar
PublicNext

PublicNext

14/07/2022 10:35 pm

Cinque Terre

28.79 K

Cinque Terre

1

ಸಂಬಂಧಿತ ಸುದ್ದಿ