ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಒಂದು ವರ್ಗದ ಜನಸಂಖ್ಯೆ ಹೆಚ್ಚಳದಿಂದ ಅರಾಜಕತೆ ಸೃಷ್ಟಿ: ಯೋಗಿ ಆದಿತ್ಯನಾಥ್

ಲಖನೌ: ಒಂದು ವರ್ಗದ ಜನಸಂಖ್ಯೆ ಹೆಚ್ಚಳದಿಂದ ದೇಶದಲ್ಲಿ ಅರಾಜಕತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ವರ್ಗದ ಜನಸಂಖ್ಯೆಯ ವೇಗ ಮತ್ತು ಶೇಕಡಾವಾರು ಹೆಚ್ಚಾಗಬಾರದು ಎಂದು ಹೇಳಿದ್ದಾರೆ.

ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಜನಸಂಖ್ಯೆಯ ಅಸಮತೋಲನವು ಕಳವಳಕಾರಿ ವಿಷಯವಾಗಿದೆ‌. ಏಕೆಂದರೆ ಧಾರ್ಮಿಕ ಜನಸಂಖ್ಯಾಶಾಸ್ತ್ರದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಕೆಲವು ವರ್ಷಗಳ ನಂತರ ಅರಾಜಕತೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯ ಪಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

12/07/2022 11:17 am

Cinque Terre

111.36 K

Cinque Terre

85

ಸಂಬಂಧಿತ ಸುದ್ದಿ