ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎಲ್ಲಿಯೂ ನಿರುದ್ಯೋಗ ಸಮಸ್ಯೆ ಕುರಿತು ಮಾತನಾಡಿಲ್ಲ. ಅವರು ಪ್ರಧಾನಿ ಆದ್ಮೇಲೆ ಯುವಕ ಜನತೆಗೆ ಕೆಲಸ ಸಿಗುತ್ತಿಲ್ಲ. ನಿರುದ್ಯೋಗ ತಾಂಡವಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಅರಮನೆ ಮೈದಾನದಲ್ಲಿ ಯುವ ಜನೋತ್ಸವ ವಿಸ್ತೃತ ಕಾರ್ಯಕಾರಿ ಸಭೆಯಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ದೇಶದ ಜನಸಂಖ್ಯೆಯಲ್ಲಿ 30 ವರ್ಷದ ಒಳಗಿನ ಯುವಕ ಯುವತಿಯರು ಶೇ 60ರಷ್ಟು ಇದ್ದಾರೆ. ಭಾರತದಲ್ಲಿ 107 ಕೋಟಿ ಜನರಿಗೆ ಕೆಲಸ ಮಾಡುವ ಶಕ್ತಿ ಇದೆ. ಆದರೆ 107 ಕೋಟಿಯಲ್ಲಿ ಶೇ. 40ಕ್ಕಿಂತ ಕಡಿಮೆ ಜನರಿಗೆ ಮಾತ್ರ ಕೆಲಸ ಇದೆ. ಜಗತ್ತಿನಲ್ಲಿ ಯಾವುದೇ ದೇಶದಲ್ಲಿ ಇಷ್ಟೊಂದು ಯುವ ಶಕ್ತಿ ಇಲ್ಲ. ನಮ್ಮ ದೇಶದಲ್ಲಿ ಮಾತ್ರ ಇಷ್ಟೊಂದು ಯುವ ಶಕ್ತಿ ಇದೆ. ಆದರೆ ದುರದೃಷ್ಟ ಯುವ ಶಕ್ತಿ ಬಳಸಿಕೊಳುವುದಕ್ಕೆ ಆಗ್ತಿಲ್ಲ. ನಗರ ಪ್ರದೇಶದಲ್ಲಿ ಶೇ 9ರಷ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ 6ರಷ್ಟು ನಿರುದ್ಯೋಗ ಸಮಸ್ಯೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಬ್ರಹ್ಮಣ್ಯ ಸ್ವಾಮಿ ಯಾರು.? ಅವ್ರು ಬಿಜೆಪಿ ನಾಯಕ. ಖುದ್ದಾಗಿ ಅವ್ರೇ ಟ್ವೀಟ್ ಮಾಡಿದ್ದಾರೆ. 2011 ರಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತ 3ನೇ ಸ್ಥಾನದಲ್ಲಿತ್ತು. ಇವಾಗ ಮೋದಿ ಪ್ರಧಾನಿ ಆದ್ಮೆಲೆ ವಿಶ್ವದ ಆರ್ಥಿಕತೆಯಲ್ಲಿ ಭಾರತ 164 ಸ್ಥಾನ ಪಡೆದಿದೆ. ಯುವಕರಿಗೆ ದೊಡ್ಡ ಅವಮಾನ ಯಾರಾದ್ರು ಮಾಡಿದ್ರೆ ಅದು ಪ್ರಧಾನಿ ಮೋದಿ ಎಂದು ಹೇಳಿದ್ದಾರೆ ಎಂದರು.
PublicNext
11/07/2022 07:19 pm