ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PSI ಹುದ್ದೆ ಅಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಹೆಸರು ಬರೆದುಕೊಳ್ಳಿ ಮಾಹಿತಿ ಕೊಡ್ತೀವಿ: ಸಿದ್ದರಾಮಯ್ಯ

ಬೆಂಗಳೂರು: ಪಿಎಸ್​ಐ ಹುದ್ದೆ ನೇಮಕಾತಿ ಹಗರಣ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಐಪಿಎಸ್​ ಅಧಿಕಾರಿ ಅಮೃತ್​ ಪೌಲ್​ ಅವರನ್ನು ಸಿಐಡಿ ಬಂಧಿಸಿದ ಬೆನ್ನಲ್ಲೇ ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕೊಟ್ಟಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲ ಮೂಡಿದೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ‌ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೃತ್​ ಪೌಲ್​ರ ಬಂಧನ ಕೇವಲ ಕಣ್ಣೊರೆಸುವ ತಂತ್ರ. ಈ ಪ್ರಕರಣದಲ್ಲಿ ಮಾಜಿ ಸಿಎಂ ಅವರ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧವೂ ಆರೋಪ ಕೇಳಿ ಬಂದಿದೆ. ಅಶ್ವತ್ಥ ನಾರಾಯಣ ಮೇಲೂ ಆರೋಪ ಇದೆ. ಆದರೆ ನನಗೆ ಸಿಕ್ಕ ಮಾಹಿತಿ ಬಹಿರಂಗಪಡಿಸಲು ಆಗಲ್ಲ. ಎಲ್ಲಿ ಕೊಡಬೇಕೋ ಅಲ್ಲಿ‌ಯೇ ಕೊಡುತ್ತೇವೆ. ಇನ್ನೂ ಹಲವು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಹಗರಣದಲ್ಲಿ ಇದ್ದಾರೆ. ಇವರಿಗೆಲ್ಲ ರಕ್ಷಣೆ ನೀಡುವ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ನಾವು ವಿಧಾನಸಭೆಯಲ್ಲಿ ಹಗರಣದ ಬಗ್ಗೆ ಪ್ರಸ್ತಾಪ ಮಾಡಿದಾಗ ಸಿಎಂ ಹಾಗೂ ಗೃಹ ಸಚಿವರು ನಮ್ಮ ಮೈಮೇಲೆ ಬಿದ್ದರು. ಪಿಎಸ್ ಐ ಹಗರಣದಲ್ಲಿ ಯಾವ ಭ್ರಷ್ಟಾಚಾರ ನಡೆದಿಲ್ಲ ಎಂದು ಸದನದಲ್ಲಿ ಹೇಳಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ವೀರಾವೇಶದಲ್ಲಿ ಉತ್ತರ ಕೊಟ್ಟಿದ್ದರು.ಇವಾಗ ಅದೇ ಹಗರಣದಲ್ಲಿ ನೇಮಕಾತಿ ಉಸ್ತುವಾರಿ ವಹಿಸಿಕೊಂಡಿದ್ದ ಅಮೃತ್ ಪೌಲ್ ಬಂಧನ ಆಗಿದೆ. ಇವಾಗ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.

ಇಂತಹ ಗೃಹ ಸಚಿವರ ಮೂಲಕ ಸಿಎಂ ಸುಳ್ಳು ಹಾಗೂ ಬೇಜವಾಬ್ದಾರಿ ಹೇಳಿಕೆ ಕೊಡಿಸುತ್ತಿದ್ದಾರೆ. ಈ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಸರ್ಕಾರ ನಡೆಸಿತ್ತು. ಸಿಐಡಿಯಿಂದ ನ್ಯಾಯ ಸಿಕ್ಕಲ್ಲ, ಇದರಲ್ಲಿ ಮಂತ್ರಿಗಳ ಪಾತ್ರ ಇದೆ. ದೊಡ್ಡ ರಾಜಕಾರಣಿಗಳ ಪಾತ್ರ ಇದೆ. ಅವರ ಬಂಧನ ಮಾಡುವುದು ಕಷ್ಟ ಅದಕ್ಕಾಗಿ ಈ ಹಗರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿದ್ದೆವು. ಮೇ 26 ತಾರೀಕಿನಂದು ಈ ಬಗ್ಗೆ ಪತ್ರ ಬರೆದಿದ್ದೆ. ಆದರೆ ನ್ಯಾಯಾಂಗ ತನಿಖೆ ಮಾಡಿಲ್ಲ ಎಂದು ಕಿಡಿಕಾರಿದರು.

ಈ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವತ್ಥ ನಾರಾಯಣ ಮೇಲೂ ಆರೋಪ ಮಾಡಿದ್ದೆವು. ಅವರ ಕಡೆಯವರು ಐದು ಮಂದಿ ಅಕ್ರಮವಾಗಿ ಆಯ್ಕೆ ಆಗಿದ್ದಾರೆ. ಹಾಗಾದರೆ ಅಶ್ವತ್ಥ ನಾರಾಯಣ ವಿರುದ್ಧ ಕ್ರಮ ಸಿಐಡಿ ತೆಗೆದುಕೊಳ್ಳುತ್ತಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 30 ಲಕ್ಷದಿಂದ ಒಂದು ಕೋಟಿಯವರೆಗೂ ಹಣ ಅವ್ಯವಹಾರ ನಡೆದಿದೆ. ಯಾರ್ಯಾರಿಗೆ ಈ ಹಣ ಹೋಗಿದೆ ಎಂದು ಗೊತ್ತಾಗಬೇಕಿದೆ. ಇವರನ್ನು ರಕ್ಷಣೆ ಮಾಡುತ್ತಿರುವುದು ರಾಜ್ಯದ ಮುಖ್ಯಮಂತ್ರಿಗಳು ಎಂದು ಆರೋಪಿಸಿದರು.

Edited By : Vijay Kumar
PublicNext

PublicNext

05/07/2022 01:47 pm

Cinque Terre

186.89 K

Cinque Terre

7

ಸಂಬಂಧಿತ ಸುದ್ದಿ