ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜುಲೈ 18ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ನವದೆಹಲಿ: 2022ನೇ ಸಾಲಿನ ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 12ರಂದು ಅಧಿವೇಶನ ಮುಕ್ತಾಯವಾಗಲಿದೆ ಎಂದು ಲೋಕಸಭೆಯ ಸಚಿವಾಲಯ ತಿಳಿಸಿದೆ.

ಮುಂಗಾರು ಅಧಿವೇಶನದ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಲೋಕಸಭೆಯ ಸಚಿವಾಲಯ, ಸಂಸತ್ತಿನ ಉಭಯ ಸದನಗಳು ಜುಲೈ 18ರಿಂದ ಸಭೆ ಸೇರುವ ಸಾಧ್ಯತೆಯಿದೆ ಎಂದು ಹೇಳಿದೆ.

11ನೇ ರಾಷ್ಟ್ರಪತಿ ಚುನಾವಣೆಯು ಮುಂಗಾರು ಅಧಿವೇಶನದ ಮೊದಲ ದಿನ ನಡೆಯಲಿದೆ. ನಂತರ ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ಜುಲೈ 25ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನೂತನ ಅಧ್ಯಕ್ಷರು ಪ್ರಮಾಣ ವಚನ ಬೋಧಿಸಲಿದ್ದಾರೆ.

ಕಳೆದ ಮುಂಗಾರು ಅಧಿವೇಶನವು ಪಕ್ಷಗಳ ಗದ್ದಲದಲ್ಲೇ ಮುಗಿದು ಹೋಗಿತ್ತು. ಪೆಗಾಸಸ್ ಹಗರಣ, ರೈತರ ಪ್ರತಿಭಟನೆಗಳು ಮತ್ತು ಬೆಲೆ ಏರಿಕೆ, ವಿಶೇಷವಾಗಿ ತೈಲ ಬೆಲೆ ಏರಿಕೆಯ ಬಗ್ಗೆ ಚರ್ಚೆಗೆ ಅವಕಾಶ ನೀಡಲು ಸರ್ಕಾರ ಒಪ್ಪದೇ ಇರುವಿಕೆಗೆ ವಿರೋಧ ಪಕ್ಷಗಳು ಆಕ್ರೋಶ ಹೊರಹಾಕಿ ಉಭಯ ಸದನಗಳ ಸಭೆಗೆ ಅಡ್ಡಿಪಡಿಸಿದ್ದವು.

Edited By : Vijay Kumar
PublicNext

PublicNext

30/06/2022 10:58 pm

Cinque Terre

60.88 K

Cinque Terre

0

ಸಂಬಂಧಿತ ಸುದ್ದಿ