ಮುಂಬೈ: ಮಹಾರಾಷ್ಟ್ರದ 19ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಏಕನಾಥ್ ಶಿಂಧೆ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ಅದರಲ್ಲಿ ಮಕ್ಕಳ ಸಾವು ಒಂದಾಗಿದೆ.
ಶಿಂಧೆ ಅವರು ಕೌನ್ಸಿಲರ್ ಆಗಿದ್ದ ಸಮಯ. ಈ ವೇಳೆ ಅವರ ಕುಟುಂಬ ಸತಾರಾಕ್ಕೆ ಪ್ರವಾಸ ತೆರಳಿತ್ತು. ಇಲ್ಲಿ ನಡೆದ ಅಪಘಾತದಲ್ಲಿ 11 ವರ್ಷದ ಮಗ ದೀಪೇಶ್ ಮತ್ತು 7 ವರ್ಷದ ಮಗಳು ಶುಭದಾ ಸಾವನ್ನಪ್ಪಿದ್ದರು. ಬೋಟಿಂಗ್ ವೇಳೆ ಸಂಭವಿಸಿದ ಅವಘಢದಲ್ಲಿ ಶಿಂಧೆಯ ಮಕ್ಕಳಿಬ್ಬರೂ ಕಣ್ಣೆದುರೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಆಗ ಶಿಂಧೆ ಅವರ ಎರಡನೇ ಮಗ ಶ್ರೀಕಾಂತನಿಗೆ ಕೇವಲ 13 ವರ್ಷ. ಶ್ರೀಕಾಂತ್ ಪ್ರಸ್ತುತ ಕಲ್ಯಾಣ್ ಲೋಕಸಭಾ ಕ್ಷೇತ್ರದಿಂದ ಶಿವಸೇನೆ ಸಂಸದರಾಗಿದ್ದಾರೆ. ಈ ಘಟನೆಯ ನಂತರ ಶಿಂಧೆ ಸಾಕಷ್ಟು ಮನನೊಂದಿದ್ದರು. ಅವರು ರಾಜಕೀಯವನ್ನೂ ದೂರವಿಟ್ಟಿದ್ದರು. ಈ ಅವಧಿಯಲ್ಲೂ ಆನಂದ್ ದಿಘೆ ಅವರನ್ನು ಬೆಂಬಲಿಸಿ ಸಾರ್ವಜನಿಕ ಜೀವನಕ್ಕೆ ಕರೆತಂದರು.
PublicNext
30/06/2022 08:10 pm