ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: "ಆರೆಸ್ಸೆಸ್‌ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ"; ಹೆಚ್ ಡಿಕೆಗೆ ಎಸ್. ಟಿ. ಸೋಮಶೇಖರ್ ಬುದ್ಧಿಮಾತು

ದಾವಣಗೆರೆ: ಆರ್ ಎಸ್ ಎಸ್ ಬಗ್ಗೆ ಕೇವಲವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಗೆ ಬುದ್ಧಿ ಇಲ್ಲ ಎಂದು ಸಹಕಾರ ಸಚಿವ ಎಸ್. ಟಿ.‌ ಸೋಮಶೇಖರ್ ಕಿಡಿಕಾರಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಕುಮಾರಸ್ವಾಮಿ ಹತಾಶರಾಗಿ ಏನೇನೋ‌ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇದೆ.‌ ಆದರೂ ಈ ರೀತಿಯಾದ ಹೇಳಿಕೆ ಕೊಡೋದು ಶೋಭೆ ತರುವಂಥದ್ದಲ್ಲ ಎಂದರು‌.

ಆರ್ ಎಸ್ ಎಸ್ ನವರಿಗೆ ಶೇ. 40 ರಷ್ಟು ಕಮಿಷನ್ ಕೊಡುತ್ತಾರೆ ಅಂದ್ರೆ ಏನರ್ಥ? ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಸುಖಾಸುಮ್ಮನೇ ಆರೋಪ ಮಾಡುವುದು ಸರಿಯಲ್ಲ. ಆರ್ ಎಸ್ ಎಸ್ ಒಂದು ದೇಶಭಕ್ತ ಸಂಘಟನೆ. ಇದರ ಬಗ್ಗೆ ಮಾತಾಡುವುದು ತಪ್ಪು. ಮೇಲಾಗಿ ಕುಮಾರಸ್ವಾಮಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಹೀಗಾಗಿ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವಾಗ ಪೂರ್ಣವಾಗಿ ತಿಳಿದು ಮಾತನಾಡಬೇಕು ಎಂದು ಹೆಚ್ ಡಿಕೆಗೆ ಸೋಮಶೇಖರ್ ಎಚ್ಚರಿಕೆ ನೀಡಿದರು‌.

Edited By : Shivu K
PublicNext

PublicNext

28/06/2022 02:27 pm

Cinque Terre

69.21 K

Cinque Terre

11

ಸಂಬಂಧಿತ ಸುದ್ದಿ