ಗದಗ: ಮಹಾರಾಷ್ಟ್ರ ಸರ್ಕಾರ ಪತನ ಅಥವಾ ಜಗಳಕ್ಕೆ ಶಿವ ಸೇನೆಯ ಒಳಗಿನ ಜಗಳ ಕಾರಣ. ಶಿವಸೇನೆ ಎಂಎಲ್ಎಗಳು ಬರೆದಿರುವ ಪತ್ರವೇ ಇದಕ್ಕೆ ಸಾಕ್ಷಿ. ಅದು ಅಸ್ವಾಭಾವಿಕ ಮೈತ್ರಿ ಅಂತಾ ಅಲ್ಲಿಯ ನಾಯಕರೇ ಹೇಳಿದ್ದಾರೆ. ಎನ್‌ಸಿಪಿ, ಕಾಂಗ್ರೆಸ್ ವಿರುದ್ಧ ಬಾಳಾ ಸಾಹೇಬರು ಹೋರಾಟ ಮಾಡಿದವರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎನ್‌ಸಿಪಿಯವರೇ ಮುಖ್ಯಮಂತ್ರಿಗಳನ್ನು ರಿಮೋಟ್ ಕಂಟ್ರೋಲ್ ನಲ್ಲಿ ಇಟ್ಟಿದ್ದರು ಅನ್ನೋ ಆರೋಪ ಇದೆ. ಶಿವಸೇನೆಯ ಎಮ್‌ಎಲ್‌ಎ, ಎಂಪಿಗಳು ನಿರಾಶೆಗೊಂಡಿದ್ದಾರೆ. ಇವರ ತಪ್ಪಿಂದ ಇಡೀ ಪಕ್ಷವೇ ಅಸಮಾಧಾನ ಗೊಂಡಿದ್ದಾರೆ. ಒಂದಿಬ್ಬರು ಪಕ್ಷ ತೊರೆಯಬಹುದು. ಆದರೆ ಇಲ್ಲಿ ಪಕ್ಷಕ್ಕೆ ಪಕ್ಷವೇ ಹೋಗಿದೆ ಎಂದರು.
ಇನ್ನೆರಡು ದಿನ ತಡೆದಿದ್ದರೇ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಬಿಟ್ರೆ ಎಲ್ಲರೂ ಹೋಗುವಹಾಗಿದೆ. ಹೊರಗಿನವರು ಷಡ್ಯಂತ್ರ ರೂಪಿಸಿ ಇಡೀ ಪಾರ್ಟಿ ತೆಗೆದುಕೊಂಡು ಹೋಗುವುದಕ್ಕೆ ಆಗಲ್ಲ.ಅವರ ವಿಚಾರಧಾರೆ ಯಾವುದು ಅನ್ನೋದು ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ಪಾರ್ಟಿ ಮಹಾರಾಷ್ಟ್ರದಲ್ಲಿ ಏನಿದೆ ? ಕಾಂಗ್ರೆಸ್ ಪಾರ್ಟಿ ಏನೋ 40 ಸೀಟ್ ಇದೆ. ಅಲ್ಲಿ ಇಲ್ಲಿ ಮೆಯಿಕೊಂಡು ಇದ್ದರು. ಕಾಂಗ್ರೆಸ್ ಅವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಅದಾಗಿಯೆ ಮುಗಿದು ಹೋಗುತ್ತಿದೆ ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್‌ಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ. ಅವರು ವಿರೋಧ ಪಕ್ಷವಾಗಿ ಅಸ್ಥಿತ್ವ ಉಳಿಸಿಕೊಳ್ಳಲಿ. ಶಾಸಕರನ್ನು ಖರೀದಿ ಮಾಡುವ ಪ್ರಶ್ನೆ ಇಲ್ಲ. ಎನ್ ಸಿಪಿ, ಕಾಂಗ್ರೆಸ್ ಅವರಿಂದ ಸಮಸ್ಯೆಯಾಗುದೆ. 50 ಜನಕ್ಕಿಂತ ಹೆಚ್ಚು ಜನರು ದುಡ್ಡಿನಿಂದ ಹೋಗುತ್ತಾರಾ. ಹಿಂದೂ ವೋಟ್ ಕಿಂತನೂ ಸಮಾನ ಮನಸ್ಕರು ಒಂದೆಡೆ ಇದ್ದೇವೆ ಎಂದ ಅವರು ವಿಶ್ವಾಸ ವ್ಯಕ್ತಪಡಿಸಿದರು.
PublicNext
25/06/2022 10:13 pm