ತಿರುವನಂತಪುರಂ: ಕೇರಳದ ವಯನಾಡ್ನಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯ ಮೇಲೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ಮಾಡಿದ್ದಾರೆ.
ಪರಿಸರ ಸೂಕ್ಷ್ಮ ವಲಯ ಸಂಬಂಧ ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಆರೋಪಿಸಿ ಎಸ್‌ಎಫ್‌ಐ ಕಾರ್ಯಕರ್ತರು ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಕಚೇರಿಗೆ ನುಗ್ಗಿದಾಗ ಪೊಲೀಸರೂ ಸ್ಥಳದಲ್ಲಿದ್ದರು. ಆದರೆ ಪೊಲೀಸರನ್ನೇ ತಳ್ಳಿಕೊಂಡು ಕಾರ್ಯಕರ್ತರು ಕಚೇರಿಯ ಗೋಡೆಗಳನ್ನೇರಿ ಒಳ ನುಗ್ಗಿದ್ದಾರೆ. ಪೀಠೋಪಕರಣ ಹಾಗೂ ಕಚೇರಿಯನ್ನು ಧ್ವಂಸ ಮಾಡಿದ್ದಲ್ಲದೇ ಎಸ್‌ಎಫ್‌ಐ ಧ್ವಜಗಳನ್ನು ಹಾರಿಸಿದ್ದಾರೆ.
PublicNext
24/06/2022 06:52 pm