ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ನಾವೇ ಮುಂದೆ ಅಧಿಕಾರಕ್ಕೆ ಬರೋದು; ಶೆಟ್ಟರ್ ವಿಶ್ವಾಸ

ದಾವಣಗೆರೆ: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ‌ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಬಾಪೂಜಿ ಸಮುದಾಯ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಸಾಮಾನ್ಯ ಕಾರ್ಯಕರ್ತ. ಸಿಎಂ ಸೇರಿದಂತೆ ಯಾವುದೇ ಹುದ್ದೆ ಖಾಲಿ ಇಲ್ಲ. ಇನ್ನು ಚುನಾವಣೆ ಬಂದಿಲ್ಲ, ಮುಂದೇ ಏನೇನಾಗುತ್ತೋ ನೋಡೋಣ ಎಂದು ಹೇಳಿದರು.

ಕಾಂಗ್ರೆಸ್ ರಾಜಭವನ ಚಲೋ‌ ಯಾವುದಕ್ಕಾಗಿ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಚಾಲೆಂಜ್ ಮಾಡಬಹುದಿತ್ತು. ಕಾನೂನು ವ್ಯಾಪ್ತಿಯಲ್ಲಿ ನ್ಯಾಯ ಕೇಳಬೇಕಿತ್ತು. ಮಾಡಿಲ್ಲ ಅಂದ್ರೆ ತಪ್ಪು ಮಾಡಿದ್ದಾರೆ ಎಂದು ಅರ್ಥ. ಎರಡು ಸಾವಿರ ಪ್ರಾಪರ್ಟಿ ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿದ್ದಾರೆ ಎಂಬ ಆರೋಪ ಇದೆ. ಕಾಂಗ್ರೆಸ್‌ ನವರಿಗೆ ತಪ್ಪು ಇದೆ ಎಂಬ ಭಯ ಇದೆ. ಹೀಗಾಗಿ ಹೋರಾಟ ಮಾಡಿ ಜನರ ಗಮನ ಬೇರೆಡೆ ಸೆಳೆಯುವ ನಾಟಕ ಮಾಡ್ತಿದ್ದಾರೆ ಎಂದು ಆರೋಪಿಸಿದರು‌.

Edited By : Nagesh Gaonkar
PublicNext

PublicNext

16/06/2022 05:19 pm

Cinque Terre

46.37 K

Cinque Terre

4

ಸಂಬಂಧಿತ ಸುದ್ದಿ