ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರುವ ಆ ಒಂದು ಟ್ವೀಟ್ ಈಗ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಹಲವು ನಾಯಕರು ಸಿದ್ದರಾಮಯ್ಯನವರ ನಡೆಯನ್ನು ಖಂಡಿಸಿದ್ದಾರೆ. 'ಹೆಡ್ಗೆವಾರ್ ಹಾಗೂ ಗೋಲ್ವಾಲ್ಕರ್ 1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಬ್ರಿಟಿಷರ ಜತೆ ಸೇರಿಕೊಂಡು ಸಂಚು ರೂಪಿಸಿ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದರು' ಎಂದು ಆರೋಪಿಸಿ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಆರ್‌ಎಸ್‌ಎಸ್ ನಾಯಕರನ್ನು ಕೆಣಕಿದ್ದರು.
ಇದಕ್ಕೆ ತೀವ್ರ ತಿರುಗೇಟು ನೀಡಿರುವ ಬಿಜೆಪಿ ಹೆಡ್ಗೆವಾರ್ ಅವರು 1940ರಲ್ಲಿ ನಾಗ್ಪುರದಲ್ಲಿ ಮರಣ ಹೊಂದಿದ್ದರು. 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಹೋರಾಟದ ವಿರುದ್ಧ ಅವರು ಹೇಗೆ ಸಂಚು ರೂಪಿಸಲು ಸಾಧ್ಯ? ಸಿದ್ದರಾಮಯ್ಯನವರ ಬುದ್ಧಿಗೆ ಮಂಕು ಕವಿದಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರ ಟ್ವೀಟ್ ಭಾರಿ ಟ್ರೋಲ್ ಗೆ ಒಳಗಾಗುತ್ತಿದೆ.
PublicNext
14/06/2022 05:22 pm