ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ವಿರೋಧಿಗಳೂ ಇದ್ದಾರೆ. ಅಭಿಮಾನಿಗಳೂ ಇದ್ದಾರೆ. ಇಂತಹ ಈ ವಿಶೇಷ ಸಿಎಂಗೆ ಮುಸ್ಲಿಂ ವಿರೋಧಿ ಅನ್ನೋರೆ ಹೆಚ್ಚು. ಆದರೆ, ಮುಸ್ಲಿಂ ಯುವಕನೊಬ್ಬ ತನ್ನ ಎದೆ ಮೇಲೆ ಯೋಗಿ ಆದಿತ್ಯನಾಥ್ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಎಲ್ಲರೂ ಅಚ್ಚರಿ ಪಡೋವಂತೆ ಮಾಡಿದ್ದಾನೆ.
ಯೋಗಿ ಆದಿತ್ಯನಾಥ್ ಅವರ ಜನ್ಮ ದಿನ ಇದೇ ತಿಂಗಳ ಆರಂಭದಲ್ಲಿಯೇ ಆಗಿದೆ. ಆ ಜನ್ಮ ದಿನದ ಹಿನ್ನೆಲೆಯಲ್ಲಿಯೇ ಯಾಮೀನ್ ಸಿದ್ದಕಿ ಎಂಬ (23) ಯುವಕ ತನ್ನ ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮರೆದಿದ್ದಾನೆ.
ಯೋಗಿ ಆದಿತ್ಯನಾಥ್ ನನ್ನ ನೆಚ್ಚಿನ ನಾಯಕ. ಇವರೇ ನನ್ನ ಆದರ್ಶ ಅಂತಲೂ ಯಾಮೀನ್ ಸಿದ್ದಿಕಿ ಹೇಳಿಕೊಡಿದ್ದಾನೆ. ಅಂದ್ಹಾಗೆ ಈ ಸಿದ್ದಿಕಿ ಫರೂಕಾಬಾದ್ ಹಾಗೂ ಮೈನ್‌ಪುರಿ ಜಿಲ್ಲೆಗಳ ಗಡಿಯಲ್ಲಿರೋ ಹಳ್ಳಿವೊಂದರಲ್ಲಿ ವಾಸವಾಗಿದ್ದಾನೆ. ಚಪ್ಪಲಿ ವ್ಯಾಪರವನ್ನೇ ಮಾಡುತ್ತಿದ್ದಾನೆ.
ಎದೆ ಮೇಲೆ ಯೋಗಿ ಆದಿತ್ಯನಾಥ್ ಟ್ಯಾಟೂ ಹಾಕಿಸಿಕೊಂಡ ಮೇಲೆ ಸ್ನೇಹಿತರು ಮತ್ತು ಬಂಧುಗಳಿಂದ ಅನೇಕ ವಿರೋಧಗಳೂ ಬಂದಿವೆ. ಯಾಮೀನ್ ಸಿದ್ದಿಕಿ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.
PublicNext
14/06/2022 12:13 pm