ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಡ್ಡಿಯೊಳಗೆ ಏನೂ ಇಲ್ಲ;ಕಾಂಗ್ರೆಸ್‌ಗೆ ಓಪನ್ ಆಫರ್ ಕೊಟ್ಟ ಎಚ್ಡಿಕೆ !

ಮೈಸೂರು: ಮಾಜಿ ಸಿಎಂ ಎಚ್‌ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷಕ್ಕೆ ಈಗೊಂದು ಬಹಿರಂಗ ಆಫರ್ ಕೊಟ್ಟಿದ್ದಾರೆ.

ಹೌದು. ಕಾಂಗ್ರೆಸ್ ಬಳಿ ನಮಗಿಂತಲೂ ಕಡಿಮೆ ಮತಗಳಿವೆ.ಈ ಲೆಕ್ಕದಲ್ಲಿ ನಮ್ಮ ಬಳಿ 32 ಮತಗಳು ಇವೆ. ಇದರಿಂದ ರಾಜ್ಯ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋ ಸಾಧ್ಯತೆ ಹೆಚ್ಚಿದೆ.

ಬೇಕಾದರೆ, ನಾವು ನಮ್ಮ ಪಕ್ಷದ ಎರಡನೇ ಪ್ರಾಶಸ್ತ್ಯ ಮತಗಳನ್ನ ಕಾಂಗ್ರೆಸ್‌ಗೆ ನೀಡುತ್ತೇವೆ. ಕಾಂಗ್ರೆಸ್ ಪಕ್ಷ ತನ್ನ ಎರಡನೇ ಪ್ರಾಶಸ್ತ್ಯ ಮತಗಳನ್ನ ಜೆಡಿಎಸ್ ಅಭ್ಯರ್ಥಿಗೆ ನೀಡಲಿ ಎಂದು ಎಚ್ಡಿಕೆ ಕಾಂಗ್ರೆಸ್ ಗೆ ಹೊಸ ಆಫರ್ ಕೊಟ್ಟಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಚಡ್ಡಿ ಜಗಳದಲ್ಲಿ ಏನೂ ಇಲ್ಲ. ಚಡ್ಡಿ ವ್ಯಾಪಾರ ಜೋರ್ ಆಗಿಯೇ ನಡೆಯುತ್ತಿದೆ.ಚಡ್ಡಿಗೂ ಭಾರೀ ಬೇಡಿಕೆ ಬಂದಿದೆ ಅಂತಲೇ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

Edited By :
PublicNext

PublicNext

07/06/2022 06:19 pm

Cinque Terre

35.33 K

Cinque Terre

2

ಸಂಬಂಧಿತ ಸುದ್ದಿ