ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಡ್ಡಿ ಸುಡುವ ಹೇಳಿಕೆ ಬಿಜೆಪಿ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಚಡ್ಡಿ ವಿಚಾರಕ್ಕೆ ಬಂದ್ರೆ ಹುಷಾರ್ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆವಾಜ್ ಹಾಕಿದ್ದಾರೆ.
ಸಿದ್ದರಾಮಯ್ಯ ಹುಚ್ಚ,ಪ್ರಚಾರ ಪಡೆಯಲು ಹೊರಟ್ಟಿದ್ದಾನೆ. ನಿಮ್ಹಾನ್ಸ್‌ಗೆ ಸೇರಿಸಿದರೂ ಚಿಕಿತ್ಸೆ ಇಲ್ಲವೇ ಇಲ್ಲ ಎಂದು ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರನ್ನ ಏಕವಚನದಲ್ಲಿಯೇ ಟೀಕಿಸಿದ ಕೆ.ಎಸ್.ಈಶ್ವರಪ್ಪನವ್ರು, ಹನುಮನ ಬಾಲಕ್ಕೆ ರಾವಣ ಬೆಂಕಿ ಇಟ್ಟಿದ್ದಕ್ಕೇನೆ ಇಡೀ ಲಂಕೆ ಹೊತ್ತಿ ಉರಿಯಿತು.ಹುಚ್ಚ ಸಿದ್ದರಾಮಯ್ಯನಿಗೆ ನಿಮಾನ್ಸ್‌ನಲ್ಲಿ ಚಿಕಿತ್ಸೆ ನೀಡಿದರೂ ಹುಷಾರಾಗೋದಿಲ್ಲ ಎಂದು ಈಶ್ವರಪ್ ಟೀಕಿಸಿದ್ದಾರೆ.
PublicNext
04/06/2022 07:45 pm