ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿವೃತ್ತಿ ದಿನವೇ "ಜೈ ಮಹಾರಾಷ್ಟ್ರ" ಎಂದ ಪಾಲಿಕೆ ನೌಕರನ ವಿರುದ್ಧ ಕನ್ನಡಿಗರು ಕೆಂಡಾಮಂಡಲ !

ಬೆಳಗಾವಿ: ಆ ವ್ಯಕ್ತಿ ನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ. 33 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಕೂಡ ಆಗಿದ್ದ. ಆದರೆ, ಈತ ನಿವೃತ್ತಿ ದಿನವೇ ಒಂದು ಎಡವಟ್ಟು ಮಾಡಿದ್ದಾನೆ.

ಹೌದು.33 ವರ್ಷ ಕರ್ನಾಟಕದ ಮಹಾ ನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾನೆ.ಆ ದಿನವೇ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಈಗ ಎಲ್ಲರ ಕೆಂಗಣ್ಣಿಗೂ ಗುರಿ ಆಗಿದ್ದಾನೆ.

ಬೆಳಗಾವಿಯ ನಗರಪಾಲಿಕೆ ದ್ವಿತೀಯ ದರ್ಜೆ ಸಹಾಯಕ ಶಿವಾಜಿ ಕಳಸೇಕರ್ ನಿವೃತ್ತಿ ಹೊಂದಿದ ವ್ಯಕ್ತಿ.ಮೇ-31 ರಂದು ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಷಣ ಮುಗಿಸಿ ಜೈ ಮಹಾರಾಷ್ಟ್ರ ಅಂತಲೇ ಕೂಗಿದ್ದಾನೆ. ಇದರಿಂದ ಕನ್ನಡ ಪರ ಹೋರಾಟಗಾರರು ಸಿಟ್ಟಾಗಿದ್ದಾರೆ.ನಿವೃತ್ತಿ ವೇತನ ತಡೆ ಹಿಡಿಯುವಂತೆಯೂ ಆಗ್ರಹಿಸಿದ್ದಾರೆ.

Edited By :
PublicNext

PublicNext

02/06/2022 12:28 pm

Cinque Terre

37.94 K

Cinque Terre

5

ಸಂಬಂಧಿತ ಸುದ್ದಿ