ದಾವಣಗೆರೆ : ಸಂಘಪರಿವಾರನ್ನು ಯಾರು ಟೀಕೆ ಮಾಡುತ್ತಾರೋ ಅವರು ದೇಶ ದ್ರೋಹಿಗಳು. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ರಾಷ್ಟ್ರಭಕ್ತಿ ಹೊಂದಿರುವ ಸಂಸ್ಥೆ. ರಾಷ್ಟ್ರದ್ರೋಹಿಗಳು, ಭಯೋತ್ಪಾದಕರು,ಉಗ್ರಗಾಮಿಗಳಿಗೆ ಬೆಂಬಲ ಕೊಡುವ ನೀವು ನಪುಸಂಕರು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನವರು ರಾಷ್ಟ್ರದ್ರೋಹಿಗಳು. ಟಿಪ್ಪು ಜಯಂತಿಯನ್ನು ಮಾಡಿದ ನೀವು ನಪುಸಂಕರು. ರಾಷ್ಟ್ರಭಕ್ತಿ ಸಂಘಟನೆ ಆರ್ ಎಸ್ ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ನವರಿಗೆ ಇಲ್ಲ ಎಂದು ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲ. ವಿನಾಃ ಕಾರಣ ನಿಮ್ಮ ನಾಲಗೆ ಹರಿಬಿಡಬೇಡಿ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರದ ನಡುವೆ ಕಚ್ಚಾಟ ನಡೆಯುತ್ತಿದ್ದು, ಆರ್ ಎಸ್ ಎಸ್ ಬೈದರೆ ರಾಹುಲ್ ಗಾಂಧಿ ನಿಮ್ಮನ್ನು ಸಿಎಂ ಮಾಡುತ್ತಾರೆಂಬ ಭ್ರಮಾ ಲೋಕದಲ್ಲಿ ಕಾಂಗ್ರೆಸ್ ನವರು ಇದ್ದಾರೆ ಎಂದು ವ್ಯಂಗ್ಯವಾಡಿದರು.
PublicNext
30/05/2022 08:44 pm