ದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಸದ್ಯ ಜಪಾನ್ ಪ್ರವಾಸದಲ್ಲಿದ್ದಾರೆ. ಸದ್ಯ ಜಪಾನ್ ನಲ್ಲಿ ಪುಟ್ಟ ಬಾಲಕನೊಬ್ಬ ಹಿಂದಿಯಲ್ಲಿ ಸ್ವಾಗತ ಕೋರಿ ಮೋದಿ ಮನಸ್ಸು ಗೆದ್ದಿದ್ದಾನೆ.ಹೌದು ಜಪಾನ್ ನಲ್ಲಿ ಹಿಂದಿ ಮಾತು ಕೇಳುತ್ತಿದ್ದಂತೆ ಮೋದಿ ಅಚ್ಚರಿಗೊಂಡಿದ್ದಾರೆ. ಅದೇ ರೀತಿ ಈ ಸ್ವೀಟ್ ವೆಲ್ ಕಂನಿಂದ ಖುಷಿ ಪಟ್ಟಿದ್ದಾರೆ.
ಮಕ್ಕಳು ಪ್ರೀತಿಯಿಂದ ಮೋದಿ ಆಟೋಗ್ರಾಪ್ ಪಡೆದಿದ್ದಾರೆ. ಇದೇ ವೇಳೆ ಹುಡುಗನೊಬ್ಬ ಹಿಂದಿಯಲ್ಲಿ ಶುಭಾಶಯ ಹೇಳಿದ್ದಾನೆ.ಆಗ ಬಾಲಕನ ಶುಭಾಶಯದಿಂದ ಪ್ರಭಾವಿತರಾದ ಪ್ರಧಾನಿ ಮೋದಿ ಅವರು ಹಿಂದಿಯನ್ನು ಎಲ್ಲಿಂದ ಕಲಿತಿದ್ದೀರಿ? ಎಂದು ಆಶ್ಚರ್ಯಚಕಿತರಾಗಿ ಕೇಳಿದರು.
ಪ್ರಧಾನಿ ನನ್ನ ಸಂದೇಶವನ್ನು ಓದಿದ್ದಾರೆ ಮತ್ತು ನಾನು ಅವರ ಆಟೋಗ್ರಾಫ್ ಸಹ ಪಡೆದುಕೊಂಡಿದ್ದೇನೆ, ಹಾಗಾಗಿ ನನಗೆ ತುಂಬಾ ಸಂತೋಷವಾಗಿದೆ ಎಂದು ಮೋದಿ ಮಿಟ್ ಬಳಿಕ 5 ನೇ ತರಗತಿಯ ವಿದ್ಯಾರ್ಥಿ ವಿಜುಕಿ ಹೇಳಿದರು.ಇನ್ನು ಮೋದಿ ಅವರು ಮೇ 24 ರಂದು ಟೋಕಿಯೊದಲ್ಲಿ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ. ಸಭೆಯಲ್ಲಿ ಜಪಾನ್ ನ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಆಸ್ಟ್ರೇಲಿಯಾದ ಹೊಸ ಪಿಎಂ ಆಂಥೋನಿ ಅಲ್ಬನೀಸ್ ಜೊತೆ ಭಾಗವಹಿಸಲಿದ್ದಾರೆ.
PublicNext
23/05/2022 05:46 pm