ಮೂಡುಬಿದಿರೆ: ಇಲ್ಲಿನ ಮಿಜಾರು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲಾ ಪ್ರಾರಂಭೋತ್ಸವ ಬಹಳ ವಿಭಿನ್ನವಾಗಿ ಹಾಗೂ ವರ್ಣರಂಜಿತವಾಗಿ ನೆರವೇರಿತು.
ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಸುಗಂಧ ದ್ರವ್ಯದ ಸಿಂಪಡಿಸಿ, ಬಣ್ಣ ಬಣ್ಣದ ಬಲೂನು ಹೂಗಳಿಂದ ಸ್ವಾಗತಿಸಿ, ಗುಲಾಬಿ ಹೂವನ್ನು ನೀಡುವ ಮೂಲಕ ಬರಮಾಡಿಕೊಂಡರು.
ತದನಂತರ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಪರಸ್ಪರ ಸಮಾಗಮ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕ ನಾರಾಯಣ ಅವರು ಪ್ರಸ್ತುತ ಶೈಕ್ಷಣಿಕ ವರ್ಷದ ರೂಪುರೇಷೆಗಳ ಬಗ್ಗೆ ಬೆಳಕು ಚೆಲ್ಲಿದರು.
ಶಿಕ್ಷಕಿ ನಾಗರತ್ನರ ಅವರು 4 ರಿಂದ 7 ನೇ ತರಗತಿಗಳ ಕಲಿಕಾ ಚೇತನದ ಬಗ್ಗೆ, ಶಿಕ್ಷಕಿ ಗೀತಾ ಅವರು ನಲಿಕಲಿ ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತನದ ಉಪಕ್ರಮದ ಮಾಹಿತಿ ಬಗ್ಗೆ ನೀಡಿದರು.
ಎಸ್.ಡಿ.ಎಂ.ಸಿ. ಉಪಾಧ್ಯಾಕ್ಷೆ ರಜನಿ ಉಪಸ್ಥಿತರಿದ್ದರು. ಶಿಕ್ಷಕಿ ಪ್ರೇಮ ಸ್ವಾಗತಿಸಿದರು. ಶಿಕ್ಷಕಿ ಅನುಪಮ ವಂದಿಸಿದರು.
ಮಕ್ಕಳಿಗೆ ಸಿಹಿತಿಂಡಿಯನ್ನು ನೀಡಲಾಯಿತು.
PublicNext
17/05/2022 09:43 am