ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡೋದನ್ನ ನಿಷೇಧಿಸಲಾಗಿದೆ. ಆದರೆ, ಇದರ ವಿರುದ್ಧವೇ ಸಮರ ಸಾರಿದಂತೇನೆ ತಾಲಿಬಾನ್ ವಕ್ತಾರ ತನ್ನ ಮಗಳನ್ನ ಶಾಲೆಗೆ ಕಳಿಸೋ ಮೂಲಕ ತೀವ್ರ ಚರ್ಚೆಗೂ ಗ್ರಾಸವಾಗಿದ್ದಾರೆ.
ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ತನ್ನ ಮಗಳಿಗೆ ಶಿಕ್ಷಣ ಕೊಡಿಸೋ ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಮಗಳನ್ನ ಶಾಲೆಗೆ ಕಳಿಸಿದ್ದಾರೆ.
ಹೌದು. ಟಿ.ವಿ.ಸಂದರ್ಶನವೊಂದರಲ್ಲಿ ಸುಹೇಲ್ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಆದರೆ, ಈ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ. ತಾಲಿಬಾನಿಗಳು ತಮ್ಮ ಮಕ್ಕಳನ್ನ ಶಾಲೆಗೆ ಕಳಿಸುತ್ತಾರೆ. ಆದರೆ, ಪರ ಹೆಣ್ಣುಮಕ್ಕಳ ಮೇಲೆ ಶಿಕ್ಷಣ ನಿಷೇಧ ಹೇರುತ್ತಾರೆ ಅಂತಲೂ ಕಾಮೆಂಟ್ ಮಾಡಿದ್ದಾರೆ.
PublicNext
12/05/2022 10:12 pm