ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಲಸ ಮಾಡದವರಿಗೆ ಟಿಕೆಟ್ ಇಲ್ಲ: ರಾಹುಲ್ ಗಾಂಧಿ ಸ್ಪಷ್ಟನೆ

ನವದೆಹಲಿ: ಕೆಲಸ ಮಾಡದವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗದು. ಹಿರಿತನದ ಆಧಾರಿತವಾಗಿಯೂ ಟಿಕೆಟ್ ನೀಡಲಾಗದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷದ ನಾಯುಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಗುಜರಾತ್‌ನ ದಾಹೋದ್‌ನಲ್ಲಿ ಪಕ್ಷದ ಬುಡಕಟ್ಟು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಪದಾಧಿಕಾರಿಗಳು ಹಾಗೂ ಹಿರಿಯ ನಾಯಕರು ಮನೆ-ಮನೆ ಪ್ರಚಾರದಲ್ಲಿ ಆದಿವಾಸಿಗಳನ್ನು ತಲುಪುವಂತೆ ಒತ್ತಾಯಿಸಿದ್ದಾರೆ. ಹಾಗೂ ಅವರ ನೈತಿಕತೆಯನ್ನು ಹೆಚ್ಚಿಸುವಂತೆ ಕೇಳಿಕೊಂಡಿದ್ದಾರೆ. ಹಿರಿತನದ ಮೇಲೆ ಟಿಕೆಟ್‌ ಕೇಳುವುದರ ಬದಲು ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಮಾತ್ರ ಟಿಕೆಟ್ ಸಿಗುತ್ತದೆ ಎಂದಿದ್ದಾರೆ.

ಪಕ್ಷದ ಚುನಾವಣಾ ತಂತ್ರವನ್ನು ಬಹಿರಂಗಪಡಿಸಿದ್ದಾರೆ. ಜನರಿಗಾಗಿ ದುಡಿಯುವ ಮತ್ತು ಹೋರಾಟ ಮಾಡುವವರಿಗೆ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಖಚಿತ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ತಮ್ಮ ಪಕ್ಷದ ಬುಡಕಟ್ಟು ಮುಖಂಡರನ್ನು ಅರಣ್ಯ, ನೆಲ ಮತ್ತು ಜಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಆದಿವಾಸಿಗಳ ಪರವಾಗಿ ಹೋರಾಡುವಂತೆ ರಾಹುಲ್ ಗಾಂಧಿ ಕೇಳಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

11/05/2022 02:24 pm

Cinque Terre

46.9 K

Cinque Terre

19

ಸಂಬಂಧಿತ ಸುದ್ದಿ