ಚಿಕ್ಕಮಗಳೂರು: ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕೊನೆ ಆಸೆಯೊಂದನ್ನ ಈಗ ಹೇಳಿ ಬಿಟ್ಟಿದ್ದಾರೆ. ಪ್ರತಿ ಚುನಾವಣೆ ಮೊದಲು ಇದು 'ನನ್ನ ಕೊನೆ ಚುನಾವಣೆ' ಎಂದು ಹೇಳ್ತಿದ್ದರು. ಆದರೆ, ಈ ಸಲ ಇವರ ಮಾತು ಬೇರೆ ಸತ್ಯವನ್ನೇ ಹೇಳುತ್ತಿದೆ. ಬನ್ನಿ, ಹೇಳ್ತಿವಿ.
ದೇವಗೌಡರಿಗೆ ಒಂದು ಆಸೆ ಇದೆ. ಅದು ಪ್ರಾದೇಶಿಕ ಪಕ್ಷವನ್ನ ಕಟ್ಟಿ ಗೆಲ್ಲಿಸೋದು. ಆ ಕನಸನ್ನ ಈಗಾಗಲೇ ಜೆಡಿಎಸ್ ಮೂಲಕ ಮಾಡಿದ್ದಾರೆ. ಆದರೆ, ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ಅಸ್ತಿತ್ವವನ್ನ ಕಳೆದುಕೊಂಡಿದೆ. ಅದಕ್ಕೇನೆ ಛಲ ಬಿಡದ ದೇವೇಗೌಡರು,ತಮ್ಮ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರೋ ಕನಸು ಕಾಣುತ್ತಿದ್ದಾರೆ.
ಎಲ್ಲರೂ ನನಗೆ 90 ವರ್ಷ ಆಗಿದೆ ಅಂತಲೇ ಹೇಳುತ್ತಾರೆ. ಆದರೆ, ನಾನು ಇನ್ನೂ 90 ವರ್ಷ ಮುಟ್ಟಿಯೇ ಇಲ್ಲ. ಈ ನನ್ನ ಜೀವನದಲ್ಲಿ ನನ್ನದೊಂದು ಕೊನೆ ಆಸೆ ಇದೆ. ಅದು ಒಂದು ಪ್ರಾದೇಶಿಕ ಪಕ್ಷವನ್ನ ಉಳಿಸಿ,ಅಧಿಕಾರಕ್ಕೆ ತರಬೇಕು.ಜೆಡಿಎಸ್ ಪಕ್ಷವನ್ನ ಅಧಿಕಾರಕ್ಕೆ ತಂದು ಕೊನೆಗೆ ಉಸಿರು ಬಿಡಬೇಕು ಅನ್ನೋದೇ ನನ್ನ ಹಠ ಅಂತಲೇ ದೇವೇಗೌಡರು ಚಿಕ್ಕಮಗಳೂರಿನಲ್ಲಿ ಹೇಳಿಕೊಂಡಿದ್ದಾರೆ.
PublicNext
09/05/2022 07:32 pm