ನವದೆಹಲಿ: ಭಾರತ ದೇಶದಲ್ಲಿ ಭಾಷಾ ಭಿನ್ನಸ್ವರ ಎದ್ದು ಬಿಟ್ಟಿದೆ. ಇತ್ತ ಯುರೋಪ್ ಟೂರ್ ನಲ್ಲಿರೋ ಮೋದಿ ನಮ್ಮ ದೇಶದಲ್ಲಿ ಸಾಂಸ್ಕೃತಿಕ ವೈವಿದ್ಯತೆ ಇದೆ. ಇದೇ ದೇಶದ ಶಕ್ತಿ.ಹಾಗೇನೆ ಭಾಷೆ ಯಾವುದಾದರೇನೂ ಸಂಸ್ಕೃತಿಯಲ್ಲಿ ನಾವೆಲ್ಲ ಭಾರತೀಯರು ಅಂತಲೇ ಸಂದೇಶ ಕೊಟ್ಟಿದ್ದಾರೆ.
ಮೂರು ದಿನದ ಯುರೋಪ್ ಟೂರ್ ಪ್ರಧಾನಿ ಮೋದಿಗೆ ಹೋದೆಲ್ಲಿ ಭವ್ಯ ಸ್ವಾಗತವೇ ಸಿಕ್ಕಿದೆ. ಡೆನ್ಮಾರ್ಕ್ ನಲ್ಲಿ ಅನಿವಾಸಿ ಭಾರತೀಯರ ಜೊತೆಗೆ ಮೋದಿ ಮಾತುಕತೆ ನಡೆಸಿದ್ದಾರೆ. ಅವರ ಮಕ್ಕಳ ಜೊತೆಗೂ ಮೋದಿ ಒಂದಷ್ಟು ಹೊತ್ತು ಕಳೆದಿದ್ದಾರೆ. ಇಲ್ಲಿ ಡೊಳ್ಳು ಕೂಡ ಬಾರಿಸಿ ಖುಷಿಪಟ್ಟಿದ್ದಾರೆ.
ಇನ್ನು ಡೆನ್ಮಾರ್ಕ್ ನ ಕೋಪನ್‌ಹ್ಯಾಗನ್‌ನಲ್ಲಿ ಅನಿವಾಸಿ ಭಾರತೀಯರೊಂದಿಗೆ ಮೋದಿ ಸಂವಾದ ನಡೆಸಿದರು. ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆ ಕಂಡುಕೊಂಡ ರಾಷ್ಟ್ರ ಅನ್ನೋದನ್ನ ಇಲ್ಲಿ ಪ್ರತಿಪಾದಿಸಿದರು.
PublicNext
04/05/2022 08:43 am