ಉತ್ತರಾಖಂಡ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಮೇ-03 ರಿಂದ ಮೇ-5 ರ ವರೆಗೂ ಉತ್ತರಾಖಂಡ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದೇ ವೇಳೆ ತಮ್ಮ ತಾಯಿ ಹಾಗೂ ತಂಗಿಯನ್ನೂ ಯೋಗಿ ಭೇಟಿ ಆಗಲಿದ್ದಾರೆ.
ಈ ಹಿಂದೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಪ್ರಮಾಣ ವಚನ ಸಮಯದಲ್ಲಿ ಯೋಗಿ ಇಲ್ಲಿಗೆ ಬಂದಿದ್ದರು. ಆದರೆ, ಆಗ ಕುಟುಂಬದವರಿಗೆ ಯೋಗಿಯನ್ನ ಭೇಟಿಯಾಗಲು ಸಾಧ್ಯವಾಗಿರಲಿಲ್ಲ.
2020 ರಲ್ಲಿ ಯೋಗಿ ತಂದೆ ಕೋವಿಡ್ ನಿಂದ ಮೃತಪಟ್ಟಿದ್ದರು. ಆಗಲೂ ಆದಿತ್ಯನಾಥ್ ತನ್ನ ಹುಟ್ಟೂರು ಪಂಚೂರಿಗೆ ಹೋಗಲು ಆಗಿರಲಿಲ್ಲ.ಆದರೆ, ಈ ಸಲ ಸ್ವಯಂ ಯೋಗಿನೇ ಕುಟುಂಬದ ಸದ್ಯರನ್ನ ಈ ಒಂದು ಪ್ರವಾಸದ ವೇಳೆ ಭೇಟಿಯಾಗಲಿದ್ದಾರೆ.
PublicNext
03/05/2022 07:15 am