ಬೆಂಗಳೂರು: ಭಾರತೀಯ ಜನತಾ ಪಾರ್ಟಿ ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯದಲ್ಲಿ ಭಾರಿ ಜಯಭೇರಿ ಬಾರಿಸಿದೆ. ಅದರಂತೆ ಈಗ ಕರ್ನಾಟಕದಲ್ಲೂ ಗೆಲುವು ಸಾಧಿಸಲೇಬೇಕು ಅಂತಲೇ ಬಿಜೆಪಿ ಉತ್ತರ ಪ್ರದೇಶದ ಮಾದರಿಯಲ್ಲಿಯೇ ಎಲೆಕ್ಷನ್ ತಯಾರಿ ಆರಂಭಿಸಿದೆ.
ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನವನ್ನ ಈ ಸಲ ಗೆಲ್ಲೋದು ಡೌಟು ಅನ್ನೋ ವಿಷಯ ಪಕ್ಷದ ವರಿಷ್ಟರ ಗಮನಕ್ಕೂ ಬಂದಂದಂತೆ ಕಾಣುತ್ತದೆ. ಅದಕ್ಕೇನೆ 'ಸೈಲೆಂಟ್ ವೋಟರ್'ಗಳನ್ನ ಗುರಿಯಾಗಿಟ್ಟುಕೊಂಡು ಕಾರ್ಯತಂತ್ರ ರೂಪಿಸಲಾಗಿದೆ ಅಂತಲೇ ಮಾಹಿತಿ ಇದೆ.
ಕರ್ನಾಟಕದಲ್ಲಿ ಬಿಜೆಪಿಗೆ 150 ಸ್ಥಾನಗಳಲ್ಲಿ ಗೆದ್ದು ಬರಲೇಬೇಕು ಅಂತಲೇ ಉತ್ತರ ಪ್ರದೇಶದ ಮಾದರಿಯನ್ನೇ ಈಗ ಅಳವಡಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ.
ಹೌದು. ಯುಪಿಯಲ್ಲಿ ಯೋಗಿ ಆದಿತ್ಯನಾಥ್ ತಮ್ಮ ಅಧಿಕಾರವಧಿಯಲ್ಲಿ ಜಾರಿಗೆ ತಂದ ಯೋಜನೆಯನ್ನ ಅವಲೋಕಿಸಿದರು.ಜನರಿಗೆ ಅವು ತಿಲುಪಿದಿಯೇ ಅಂತಲೇ ನೋಡಿದರು. ಬಳಿಕ ಫಲಾನುಭವಿಗಳ ಹೊಸ ಬೇಡಿಕೆಗಳನ್ನು ಆಲಿಸಿದರು.ಅವರ ಅಗತ್ಯಕ್ಕೆ ಸ್ಪಂದಿಸೋ ಕೆಲಸ ಮಾಡಿದರು.
ಈ ಕಾರಣದಿಂದಲೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತೆ ಗೆದ್ದು ಬಂದಿದ್ದಾರೆ. ಇದೇ ಮಾದರಿಯನ್ನೆ ಬಿಜೆಪಿ ಕರ್ನಾಟಕದಲ್ಲೂ ಅನುಸರಿಸಲು ನಿರ್ಧರಿಸಿದೆ.
PublicNext
29/04/2022 11:12 am