ಬೆಂಗಳೂರು:ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅಂತಹ ಕ್ರೇಜ್ ಏನೂ ಇಲ್ಲ. ಆದರೂ, ಆಮ್ ಆದ್ಮಿ ಪಕ್ಷದ
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೇ ಏಪ್ರಿಲ್-21 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದೆ ಎಂದು ಹೇಳಿದ್ದಾರೆ.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಈ ಸಮಾವೇಶದಲ್ಲಿ ಅರವಿಂದ್ ಕೇಜ್ರಿವಾಲ್ ಭಾಗಿ ಆಗುತ್ತಿದ್ದಾರೆ. ದೆಹಲಿಯಿಂದಲೇ ಸ್ಪೂರ್ತಿಗೊಂಡಿರೋ ರಾಜ್ಯ ರೈತ ಸಂಘವು ಅರವಿಂದ್ ಕೇಜ್ರಿವಾಲ್ ಗೆ ಆಹ್ವಾನ ನೀಡಿದ್ದಾರೆ.
PublicNext
18/04/2022 04:27 pm