ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿಯೆ ಗೆದ್ದು ಬಂದಿದ್ದಾರೆ. ಆದರೆ, ಈಗ ಒಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಸುಮಲತಾ ಅಂಬರೀಶ್ ಬಿಜೆಪಿ ಪಕ್ಷವನ್ನ ಸೇರ್ತಾರಾ ? ಅನ್ನೋ ಪ್ರಶ್ನೆ ಈಗ ಅತಿ ಹೆಚ್ಚು ಕೇಳಿ ಬರುತ್ತಿದೆ.
ಹೌದು. ಸುಮಲತಾ ಅಂಬರೀಶ್ ಅವರ ಆಪ್ತ ಇಂಡುವಾಳು ಸಚ್ಚಿದಾನಂದ ಹುಟ್ಟುಹಬ್ಬಕ್ಕೆ ಬಿಜೆಪಿಗರು ಶುಭ ಕೋರಿದ್ದಾರೆ. ವಿಶೇಷ ಅಂದ್ರೆ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೂಡ ವಿಶ್ ಮಾಡಿದ್ದಾರೆ.
ಇಷ್ಟೇ ಅಲ್ಲ, ಸುಮಲತಾ ಅವರ ಅಪ್ತ ಸಚ್ಚಿದಾನಂದ ಮನೆಗೆ ಬಿಜೆಪಿ ನಾಯಕರ ದಂಡೇ ಬಂದು ಶುಭ ಕೋರಿದೆ. ಈ ಹಿನ್ನೆಲೆಯಲ್ಲಿಯೇ ಈಗ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷ ಸೇರ್ತಾರಾ ಅನ್ನೋ ಪ್ರಶ್ನೆ ಹೇಳುವಂತೆ ಮಾಡಿದೆ.
PublicNext
18/04/2022 03:20 pm