ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಪರಿಶಿಷ್ಟರನ್ನು ಹೊರಗಿಡುವುದು ಯಾವ ಸಂಸ್ಕೃತಿ' : ಪರಮೇಶ್ವರ

ಕೊರಟಗೆರೆ (ತುಮಕೂರು) : ನನ್ನನ್ನೂ ಇಂದಿಗೂ ಸಹ ದೇವಸ್ಥಾನದಲ್ಲಿ ಬಿಡುವುದಿಲ್ಲ ಎಂದು ರಾಜ್ಯದ ಹಿರಿಯ ರಾಜಕಾರಣಿ ಶಾಸಕ ಡಾ.ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆಯ ಕಹಿ ಅನುಭವವನ್ನು ಬಿಚ್ಚಿಟ್ಟ ಅವರು, ನಾನು 'ಪಿಎಚ್.ಡಿ ಮಾಡಿದ್ದೇನೆ. ವಿದೇಶಗಳಿಗೆ ಹೋಗಿ ಬಂದಿದ್ದೇನೆ. ಹಿಂದೆ ಸಚಿವನಾಗಿದ್ದೆ, ಈಗ ಶಾಸಕನಾಗಿದ್ದೇನೆ. ರಾಜ್ಯದಲ್ಲಿ ಹಿರಿಯ ರಾಜಕಾರಣಿಯಾಗಿದ್ದೇನೆ. ಆದರೂ ದೇವಸ್ಥಾನದ ಒಳಗೆ ಬಿಟ್ಟುಕೊಳ್ಳುವುದಿಲ್ಲ' ಎಂದು ಹೇಳಿದರು.

'ದೇವಸ್ಥಾನಗಳಿಗೆ ಹೋದರೆ ಸ್ವಲ್ಪ ನಿಂತುಕೊಳ್ಳಿ, ಅಲ್ಲಿಗೆ ಮಂಗಳಾರತಿ ತರುತ್ತೇವೆ ಎನ್ನುತ್ತಾರೆ. ಇಂತಹ ದಯನೀಯ ಸ್ಥಿತಿ ಈ ಸಮಾಜದಲ್ಲಿ ಇನ್ನೂ ಜೀವಂತ ಇದೆ' ಎಂದು ವಿಷಾದಿಸಿದರು.ಈ ಬಗ್ಗೆ ಪ್ರಶ್ನಿಸಿದರೆ ಇದು ನಮ್ಮ ಭಾರತೀಯ ಸಂಸ್ಕೃತಿ ಎಂದು ದೊಡ್ಡದಾಗಿ ಹೇಳುತ್ತಾರೆ.

ಅಂತರ್ಜಾತಿ ವಿವಾಹ ಮಾಡಿಸಿದರೆ ಜಾತೀಯತೆ ತೊಲಗುತ್ತದೆ ಎಂಬ ಕಾರಣಕ್ಕೆ ಬಸವಣ್ಣನವರು ಆ ಕಾಲಕ್ಕೆ ಅಂತರ್ಜಾತಿ ವಿವಾಹ ಮಾಡಿಸಿದರು. ಆದರೆ ಈಗ ಅಂತರ್ಜಾತಿ ವಿವಾಹವಾದರೆ ನೇಣು ಹಾಕುವುದನ್ನು ಕಂಡಿದ್ದೇವೆ. ಮರ್ಯಾದೆಗೇಡು ಹತ್ಯೆ ನಡೆಯುತ್ತಿವೆ. ಸಮಾನತೆ ಬಗ್ಗೆ ಮಾತನಾಡುವ ನಾವು ಈ ಬಗ್ಗೆ ಯೋಚನೆ ಮಾಡಬೇಕಾಗಿದೆ' ಎಂದು ಹೇಳಿದರು.

Edited By : Nirmala Aralikatti
PublicNext

PublicNext

15/04/2022 12:13 pm

Cinque Terre

48.37 K

Cinque Terre

21

ಸಂಬಂಧಿತ ಸುದ್ದಿ