ತಂಜಾವೂರು: ಪತಿಯ ಆಜ್ಞೆಯಂತೆ ಪಟ್ಟಣ ಪಂಚಾಯತಿಯಲ್ಲಿ ಇದ್ದ ಪ್ರಧಾನಿ ನರೇಂದ್ರ ಮೋದಿ ಆವರ ಫೋಟೋವನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ತೆಗೆದು ಹಾಕಿದ್ದಾರೆ.
ತಮಿಳು ನಾಡಿನ ತಂಜಾವೂರು ಜಿಲ್ಲೆಯ ವೆಪ್ಪತ್ತೂರು ಪಟ್ಟಣ ಪಂಚಾಯತಿಯಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಮುಖಂಡ ಸಿಟಿಆರ್ ನಿರ್ಮಲ್ ಕುಮಾರ್ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು ವೈರಲ್ ಆಗಿದೆ.
ಫೋಟೋ ತೆಗೆಯುತ್ತಿರುವ ಅಂಜಮ್ಮಾಳ್ ಇತ್ತೀಚೆಗಷ್ಟೇ ಪಟ್ಟಣ ಪಂಚಾಯತಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆ ನಂತರ ಆಕೆಯ ಪತಿಯು ಪತ್ನಿಯ ಕಚೇರಿಯಲ್ಲಿದ್ದ ಮೋದಿ ಫೋಟೋ ತೆಗೆಯಕಲು ಹೇಳಿದ್ದಾನೆ. ಅದಕ್ಕೆ ಅಂಜಮ್ಮಾಳ್ ಒಪ್ಪದಿರುವಾಗ ಪತಿ ಒತ್ತಾಯದಿಂದ ಫೋಟೋ ತೆಗೆಸಿದ್ದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ.
PublicNext
14/04/2022 11:08 pm