ಬಾಗಲಕೋಟೆ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಭಾಸ್ಕರ್ ರಾವ್ ಪರೋಕ್ಷವಾಗಿಯೇ ಸ್ಥಳೀಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ದೂರಿದ್ದಾರೆ.
ಸಂತೋಷ್ ಸಾವಿಗೆ ನೇರವಾಗಿ ನೀವು ಕಾರಣ ಅಂತಲೇ ಲಕ್ಷ್ಮೀ ಹೆಬ್ಬಾಳಕರ್ ಮೇಲೆ ಆಮ್ ಆದ್ಮಿಯ ಭಾಸ್ಕರ್ ರಾವ್
ಆರೋಪ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಇವರು, ರಾಜಕಾರಣಿಗಳ ವಿರುದ್ಧ ಪ್ರೋಟೆಸ್ಟ್ ಮಾಡೋಕೆ ಆಗೋದಿಲ್ಲ. ಇವರೆಲ್ಲ ಪ್ರಭಾವಿಗಳಾಗಿಯೇ ಇರುತ್ತಾರೆ. ಇಲ್ಲವೇ ರಿಮಾರ್ಕ್ ಮಾಡಿಯೇ ಬಿಡುತ್ತಾರೆ. ಅಥವಾ ಸಸ್ಪೆಂಡ್ ಮಾಡಿ ಬಿಡುತ್ತಾರೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ್ ಈಗ ಪ್ರತಿಭಟನೆ ಮಾಡೋದು ಅವಿವೇಕಿತನವೇ ಆಗಿದೆ. ಹಾಗೇನೆ ಈಗ ರಾಜ್ಯ ನಾಯಕರನ್ನ ಫ್ಲೈಟ್ ನಲ್ಲಿ ಕರೆಸಿಕೊಂಡು, ಸಂತೋಷ್ ಕುಟುಂಬದ ಎದುರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಭಾಸ್ಕರ್ ರಾವ್ ಕಿಡಿಕಾರಿದ್ದಾರೆ.
PublicNext
14/04/2022 05:06 pm