ಗದಗ: ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರು ಆಡಿಕೊಳ್ಳುವಂತಾಗಿದೆ. 40% ಕಮಿಷನ್ ಬಗ್ಗೆ ಎಲ್ಲೆಡೆ ಚರ್ಚೆಡಯಾಗುತ್ತಿದೆ. ಇದನ್ನು ಕೂಡಲೇ ತಿದ್ದಿಕೊಳ್ಳದಿದ್ರೆ ಬಿಜೆಪಿ ಧೂಳಿಪಟ ಆಗಲಿದೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಗದಗ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೈತಿಕತೆ ಇದ್ರೆ ತಕ್ಷಣ ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕು. ಕೂಡಲೇ ರಾಜೀನಾಮೆ ಕೊಟ್ಟು ದೋಷಮುಕ್ತರಾದ ನಂತರ ಮತ್ತೆ ಸಂಪುಟ ಸೇರಬಹುದು. ಮೊದಲು ತನಿಖೆ ಆಗಲಿ. ಸತ್ಯಾಸತ್ಯತೆ ಹೊರಬರಲಿ. ಈ ಹಿಂದೆ ಎಲ್ ಕೆ ಅಡ್ವಾನಿಯವರು ಈ ರೀತಿ ಸಾಕಷ್ಟು ಬಾರಿ ಆದರ್ಶ ಪಾಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನವರಿಗೆ ಆಹಾರ ಒದಗಿಸುವುದು ಸರಿಯಲ್ಲ.ಬಿಜೆಪಿ ಭ್ರಷ್ಟಾಚಾರ ಮಿತಿಮೀರಿದೆ, 40%ಅನ್ನೋದು ಬಹಿರಂಗವಾಗಿ ಚರ್ಚೆಯಾಗುತ್ತಿದೆ. ಈ ಹಿಂದೆಯೂ ಸಂತೋಷ ಪಾಟೀಲ್ ರಾಜ್ಯಪಾಲರಿಗೆ, ಮುಖ್ಯಮಂತ್ರಿ ಗೆ ಪ್ರಧಾನಿಗೂ ಸಹ ಪತ್ರ ಬರೆದಿದ್ದರು. ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲ, ಕಾಂಗ್ರೆಸ್ ಜೆಡಿಎಸ್ ರೀತಿಯಲ್ಲಿ ನೀವು ಧೂಳಿಪಟವಾಗ್ತಿರಿ ಎಚ್ಚರ ಇರಲಿ. ಬಿಜೆಪಿ ಕಾರ್ಯಕರ್ತರು ಕೇವಲ ಪೋಸ್ಟರ್, ಝೇಂಢಾ ಹಿಡಿಯೋಕಷ್ಡೇ ಸೀತಮಿತವಾಗಿದ್ದಾರೆ. ಗುತ್ತಿಗೆದಾರರೆಲ್ಲ ಮುಸ್ಲಿಮರೇ ಹೆಚ್ಚಾಗಿದ್ದಾರೆ, ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರೇ ಗುತ್ತಿಗೆದಾರರಿದ್ದಾರೆ. ಭಾರತೀಯ ಜನತಾ ಪಕ್ಷ ಈಗ ಕಾರ್ಯಕರ್ತರ ಪಕ್ಷವಾಗಿ ಉಳಿದಿಲ್ಲ ಎಂದು ಮುತಾಲಿಕ್ ಹೇಳಿದ್ದಾರೆ.
PublicNext
13/04/2022 05:30 pm