ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದೇ ಬಂತು. ಇದರಿಂದ ಅಮೆರಿಕಾದ ದೊಡ್ಡಣ್ಣ ಕೆಂಡಾಮಂಡಲ ವಾಗಿದ್ದರು. ಅದೇ ರೀತಿ ರಷ್ಯಾ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದ ರಾಷ್ಟ್ರಗಳ ಮೇಲೂ ಅಮೆರಿಕಾ ಸಿಟ್ಟಾಗಿತ್ತು.ಅದರಲ್ಲಿ ಭಾರತ ಕೂಡ ಒಂದು.
ಭಾರತ ದೇಶ ರಷ್ಯಾ ಜೊತೆಗೆ ಉತ್ತಮ ಸಂಬಂಧ ಹೊಂದಿದೆ. ಇದರಿಂದ ಅಮೆರಿಕಾ ಅಧ್ಯಕ್ಷ ಭಾರತದೊಂದಿಗೆ ಸಂಬಂಧ ಕಡಿದುಕೊಳ್ತಾರೆ ಅನ್ನೋ ಅನುಮಾನವೂ ಶುರು ಆಗಿತ್ತು.
ಆದರೆ, ಅದೆಲ್ಲ ಸುಳ್ಳು ಅನ್ನೋ ಒಂದು ಬೆಳವಣಿಗೆ ಆಗಿದೆ. ಹೌದು. ಭಾರತ ಮತ್ತು ಅಮೆರಿಕಾ ಸಂಬಂಧ ಚೆನ್ನಾಗಿಯೇ ಇದೆ. ಅದಕ್ಕೆ ಯಾವುದೇ ರೀತಿಯ ಧಕ್ಕೆ ಬಂದಿಲ್ಲ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ವಿಶೇಷ ಸಭೆ ಮಾಡುತ್ತಿದ್ದಾರೆ.
ಇದು ವರ್ಚ್ಯೂವಲ್ ಮೀಟಿಂಗ್ ಆಗಿದ್ದು, ಭಾರತ ಮತ್ತು ಅಮೆರಿಕಾದ ಮಧ್ಯೆ ಸಂಬಂಧ ಚೆನ್ನಾಗಿಯೇ ಇದೆ ಅನ್ನೋದಕ್ಕೆ ಸಾಕ್ಷಿ ಆಗಿದೆ. ಈ ಸಭೆಯಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿರೋದ್ರ ಬಗ್ಗೆ ಮಹತ್ವದ ಚರ್ಚೆ ಆಗುತ್ತಿದೆ.
ವಿಶೇಷವಾಗಿ ರಷ್ಯಾದಿಂದಲೇ ಭಾರತ ಇಂಧನ ಆಮದು ಮಾಡಿಕೊಳ್ತಿದೆ. ಅದರ ಬಗ್ಗೆನೂ ಇಲ್ಲಿ ಪ್ರಸ್ತಾಪ ಆಗೋ ಚಾನ್ಸಸ್ ಜಾಸ್ತಿನೇ ಇದೆ. ಹೀಗೆ ಇನ್ನು ಹಲವು ಮಹತ್ವದ ವಿಷಯ ಇಲ್ಲಿ ಚರ್ಚೆಗೆ ಬರ್ತಾಯಿವೆ.
PublicNext
11/04/2022 09:33 am