ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೌಡ್‌ ಸ್ಪೀಕರ್‌ನಲ್ಲಿ ಹನುಮಾನ ಚಾಲೀಸಾ-MNS-ನಾಯಕನ ಬಂಧನ

ಮುಂಬೈ: ಶಿವಸೇನೆ ಪಕ್ಷದ ಕಚೇರಿ ಎದುರು ಎಂಇಎಸ್ ಕಾರ್ಯಕರ್ತರು ಲೌಡ್ ಸ್ಪೀಕರ್‌ಗಳನ್ನ ಹಾಕಿ ಹನುಮಾನ್ ಚಾಲೀಸಾ ಹಾಗೂ ಭಕ್ತಿಗೀತೆಳನ್ನ ಹಚ್ಚಿರೋ ಘಟನೆ ನಡೆದಿದೆ.

ಈ ವಿಷಯ ತಿಳಿಯುತ್ತಿದಂತೇನೆ, ಶಿವಾಜಿ ಪಾರ್ಕ್ ಠಾಣೆ ಪೊಲೀಸರು ಮಹಾರಾಷ್ಟ್ರ ನವನಿರ್ಮಾಣ ಸೇನಾ ನಾಯಕ ಯಶವಂತ್ ಕಿಲ್ಲೇಕರ್ ನನ್ನ ಬಂಧಿಸಿದ್ದಾರೆ. ಲೌಡ್ ಸ್ಪೀಕರ್ ಸೇರಿದಂತೆ ಇತರ ಉಪಕರಣಗಳನ್ನ ಜಪ್ತಿ ಮಾಡಿದ್ದಾರೆ.

ರಾಜ್ಯಾದ್ಯಂತ ಮಸೀದಿಗಳಿಗೆ ಹಾಕಿರೋ ಧ್ವನಿವರ್ಧಕಗಳನ್ನ ತೆಗೆಯಲು ಸರ್ಕಾರ ಕ್ರಮ ತೆಗೆದುಕೊಳ್ಳದೇ ಇದ್ದರೇ, ನಾವೂ ಮಸೀದಿ ಮುಂದೆ ಹನುಮಾನ್ ಚಾಲೀಸಾ ಪಠಣ ಹಾಕುತ್ತೇವೆ ಎಂದು ಎಂಇಎಸ್ ಮುಖ್ಯಸ್ಥ ರಾಜ್ ಠಾಕ್ರೆ ಸರ್ಕಾರವನ್ನ ಎಚ್ಚರಿಸಿದ್ದರು. ಅದು ಈಗ ಕಾರ್ಯರೂಪಕ್ಕೆ ಬಂದಂತಿದೆ.

Edited By :
PublicNext

PublicNext

10/04/2022 12:47 pm

Cinque Terre

61.13 K

Cinque Terre

0

ಸಂಬಂಧಿತ ಸುದ್ದಿ