ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಗ್ಲೀಷ್ ಬದಲು ಹಿಂದಿನೇ ಬಳಕೆ ಆಗಲಿ:ಅಮಿತ್ ಶಾ

ನವದಹೆಲಿ: ಭಾರತದಲ್ಲಿ ಇಂಗ್ಲೀಷ್ ಪ್ರಭಾವ ಜಾಸ್ತಿನೇ ಇದೆ. ಇದನ್ನ ಎಲ್ಲರೂ ಒಪ್ಪಿಕೊಳ್ತಾರೆ. ಆದರೆ, ಈ ಇಂಗ್ಲೀಷ್ ಭಾಷೆಯ ಪರ್ಯಾಯವಾಗಿ ಹಿಂದಿನೇ ಬಳಕೆ ಆಗಬೇಕು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ ಅಮಿತ್ ಶಾ ಮಾತನಾಡಿದ್ದಾರೆ. ಸಚಿವ ಸಂಪುಟದ ಶೇಕಡ 70 ರಷ್ಟು ಕಾರ್ಯಸೂಚಿಗಳು ಹಿಂದಿಯಲ್ಲಿಯೇ ಇವೆ.

ದೇಶದ ಅಧಿಕೃತ ಭಾಷೆಯಲ್ಲಿಯೇ ಸರ್ಕಾರ ನಡೆಸಬೇಕು ಅನ್ನೋದು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವೂ ಆಗಿದೆ. ಇದರಿಂದ ಹಿಂದಿ ಭಾಷೆಯ ಮಹತ್ವ ಹೆಚ್ಚಾಗುತ್ತದೆ.

ಹಾಗೇನೆ ಒಂದು ರಾಜ್ಯದ ಜನರು ಮತ್ತೊಂದು ರಾಜ್ಯದ ಜನರ ಜೊತೆಗೆ ಒಂದೇ ಭಾಷೆಯಲ್ಲಿ ಮಾತನಾಡಬೇಕು. ಇದು ದೇಶದ ಏಕತೆಯನ್ನ ತೋರುತ್ತದೆ ಅಂತಲೂ ಗೃಹ ಸಚಿವ ಅಮಿತ್ ಶಾ ವಿವರಿಸಿದ್ದಾರೆ.

Edited By :
PublicNext

PublicNext

08/04/2022 01:53 pm

Cinque Terre

73.32 K

Cinque Terre

14

ಸಂಬಂಧಿತ ಸುದ್ದಿ