ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಸಿಎಂ ಆಗಿದ್ದರೇ ಅಭಿವೃದ್ಧಿ ಆಗ್ತಾ ಇತ್ತು !

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗೋ ಇಂಗಿತವನ್ನ ತಮ್ಮ ಬಾದಾಮಿ ಕ್ಷೇತ್ರದ ಮತದಾರರ ಮುಂದೆ ಪ್ರಸ್ತಾಪ ಮಾಡಿದ್ದಾರೆ. ನಾನು ಸಿಎಂ ಆಗಿದ್ದರೇ ನಿಮ್ಮ ಎಲ್ಲ ಅಭಿವೃದ್ಧಿ ಕೆಲಸಗಳನ್ನ ಮಾಡಿ ಮುಗಿಸಿ ಬಿಡುತ್ತಿದ್ದೆ ಎಂದು ಮತ್ತೊಮ್ಮೆ ಸಿಎಂ ಆಗೋ ಆಸೆಯನ್ನ ಹೇಳಿಕೊಂಡಿದ್ದಾರೆ.

ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಿದ್ದರೇ, ನಾನು ಸಿಎಂ ಆಗಿದ್ದರೇ, ನಿಮ್ಮ ಕ್ಷೇತ್ರದ ಅಭಿವೃದ್ಧಿಯನ್ನ ಇನ್ನಷ್ಟು ಮಾಡಲು ಸಾಧ್ಯ ಆಗುತ್ತಿತ್ತು ಅಂತಲೇ ಸಿದ್ದರಾಮಯ್ಯ ಮನದ ಆಸೆಯನ್ನ ವಿವರಿಸಿದ್ದಾರೆ.

ಬಾದಾಮಿ ಕ್ಷೇತ್ರದ ತಮ್ಮ ಮತದಾರರ ಸಮಸ್ಯೆಗಳನ್ನ ಆಲಿಸಿದ್ದಾರೆ. ನಾನು ವಿರೋಧ ಪಕ್ಷದ ನಾಯಕನೂ ಆಗಿರೋದ್ರಿಂದ ಪ್ರತಿ ಸಲ ಇಲ್ಲಿಗೆ ಬಂದ ಹೋಗೋದಕ್ಕೆ ಆಗೋದಿಲ್ಲ. ಆದರೆ ನಿಮ್ಮ ಕೆಲಸಗಳನ್ನ ಮಾಡಿದ್ದೇನೆ ಎಂಬ ನಂಬಿಕೆ ಮತ್ತು ಸಂತೃಪ್ತಿ ನನಗಿದೆ. ನನ್ನ ಗೆಲ್ಲಿಸಿದ್ದಕ್ಕೆ ನಿಮಗೆ ವಂದನೆಗಳೂ ಅಂತಲೂ ಹೇಳಿದ್ದಾರೆ.

Edited By :
PublicNext

PublicNext

08/04/2022 09:11 am

Cinque Terre

50.17 K

Cinque Terre

23

ಸಂಬಂಧಿತ ಸುದ್ದಿ