ಹೊಸಪೇಟೆ: ಹುಬ್ಬಳ್ಳಿಯಲ್ಲಿ ನಡೆದ ರೀತಿಯಲ್ಲಿಯೇ ಬಿಜೆಪಿ ಕಾರ್ಯಕಾರಿಣಿ ಈಗ ವಿಜಯನಗರ ಜಿಲ್ಲೆಯಲ್ಲಿ ಪ್ಲಾನ್ ಆಗಿದೆ. ಏಪ್ರಿಲ್ 16 ಮತ್ತು 17 ರಂದು ಕಾರ್ಯಕಾರಿಣಿ ನಡೆಯಲಿದ್ದು, ಇನ್ನು 10 ದಿನ ಇರೋವಾಗಲೇ ಹೊಸಪೇಟೆ ನಗರ ಈಗಲೇ ಸಂಪೂರ್ಣ ಕೇಸರಿಮಯವಾಗಿ ಬಿಟ್ಟಿದೆ.
ಬಿಜೆಪಿ ಕಾರ್ಯಕಾರಿಣಿಗಾಗಿಯೇ ಇಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದೆ. ಭಟ್ರಹಳ್ಳಿ ಆಂಜನೇಯ ದೇಗುಲದ ಬಯಲು ಜಾಗದಲ್ಲಿಯೇ ಹವಾ ನಿಯಂತ್ರಿತ ಟೆಂಟ್ ನಿರ್ಮಾಣ ಆಗುತ್ತಿದೆ. ಕಾರ್ಯಕಾಣಿಸಿ ಸಭೆಗಾಗಿಯೇ 80 ಅಡಿ ಉದ್ದ ಮತ್ತು 40 ಅಡಿ ಅಗಲದ ವೇದಿಕೆ ರೆಡಿ ಆಗುತ್ತಿದೆ.
ಈ ಒಂದು ವೇದಿಕೆ ಹಿಂಭಾಗದಲ್ಲಿ 30 ಅಡಿ ಬ್ಯಾಕ್‌ಡ್ರಾಪ್ ಕೂಡ ನಿರ್ಮಾಣ ಆಗುತ್ತಿದೆ. ವಿಶೇಷ ಅಂದ್ರೆ ಈ ಒಂದು ಬ್ಯಾಕ್‌ಡ್ರಾಪ್‌ನಲ್ಲಿ ಹಂಪಿಯ ವಾಸ್ತು ಶಿಲ್ಪದ ಪ್ರಪಂಚ ಗೋಚರಿಸಲಿದೆ. ಇವುಗಳ ಮಧ್ಯೆ ಕಮಲದ ಸಿಂಬಲ್ ಕಂಗೊಳಿಸಲಿದೆ. ಒಟ್ಟಾರೆ, ಹೊಸಪೇಟೆ ಈಗಲೇ ಕೇಸರಿಮಯವಾಗಿ ಬಿಟ್ಟಿದೆ.
PublicNext
08/04/2022 08:25 am