ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೃಹಸಚಿವರಾದವರು ಪೊಲೀಸರ ಮಾಹಿತಿ ಪಡೆಯಬೇಕೆ ಹೊರತು ವಾಟ್ಸಾಪ್ ಯುನಿವರ್ಸಿಟಿಯದ್ದಲ್ಲ : ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬೆಂಗಳೂರಿನಲ್ಲಿ ದಲಿತ ಯುವಕ ಚಂದ್ರು ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಆತುರದಲ್ಲಿ ಗೃಹ ಸಚಿವರು ಕೊಟ್ಟ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೋಂ ಮಿನಿಸ್ಟರ್ ವಿರುದ್ಧ ಹರಿಹಾಯ್ದಿದ್ದಾರೆ.

ಗೃಹ ಸಚಿವರಾದವರು ಪೊಲೀಸರಿಂದ ಮಾಹಿತಿ ಪಡೆಯಬೇಕೆ ಹೊರತು ವಾಟ್ಸ್ಆ್ಯಪ್ ಯುನಿವರ್ಸಿಟಿಯಿಂದಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಗೋರಿಪಾಳ್ಯದಲ್ಲಿ ನಡೆದ ಕೊಲೆ ವಿಚಾರವಾಗಿ ಮಾತನಾಡಿದ್ದ ಆರಗ ಜ್ಞಾನೇಂದ್ರ ಅವರು, 'ಚಂದ್ರು ದಲಿತ ಸಮುದಾಯಕ್ಕೆ ಸೇರಿದ ಯುವಕ. ಸೋಮವಾರ ತಡರಾತ್ರಿ ಆತನನ್ನು ಅಡ್ಡಗಟ್ಟಿದ್ದ ಗುಂಪೊಂದು ಉರ್ದು ಮಾತಾಡುವಂತೆ ಒತ್ತಾಯಿಸಿತ್ತು. ಆತನಿಗೆ ಉರ್ದು ಬರುತ್ತಿರಲಿಲ್ಲ. ಹೀಗಾಗಿ ಚೂರಿಯಿಂದ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ' ಎಂದು ಹೇಳಿದ್ದರು. ಈ ಹೇಳಿಕೆಯು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ‘ಚಂದ್ರುವಿನ ಕೊಲೆಯು ದ್ವಿಚಕ್ರ ವಾಹನ ಅಪಘಾತದ ವಿಚಾರವಾಗಿ ನಡೆದಿದ್ದು’ ಎಂದು ಆರಗ ಸ್ಪಷ್ಟನೆ ನೀಡಿದ್ದರು.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ‘ಆರಗ ಜ್ಞಾನೇಂದ್ರ ಅವರದ್ದು ಅಚಾತುರ್ಯ ಅಲ್ಲ, ಆತುರ ಹಾಗೂ ದಡ್ಡತನವೂ ಅಲ್ಲ. ಹೆಣವನ್ನು ಬಳಸಿಕೊಳ್ಳುವ ಟೂಲ್ ಕಿಟ್ ಮಾತುಗಳನ್ನಾಡಿದರು ಅಷ್ಟೇ’ ಎಂದು ಆರೋಪಿಸಿದ್ದಾರೆ. ‘ಬಿಜೆಪಿಯ ಟೋಪಿ ಹಾಕಿದಾಗ ಹೆಣ ರಾಜಕೀಯದ ಮನಸ್ಥಿತಿ ಜಾಗೃತವಾಗಿತ್ತು, ಟೋಪಿ ತೆಗೆದಾಗ ವಾಸ್ತವದ ಅರಿವಾಯ್ತು’ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

Edited By : Nirmala Aralikatti
PublicNext

PublicNext

06/04/2022 10:17 pm

Cinque Terre

32.2 K

Cinque Terre

11

ಸಂಬಂಧಿತ ಸುದ್ದಿ