ಬೆಂಗಳೂರು: ಸರ್ಕಾರ ನಮ್ಮ ಕೈಯಲ್ಲಿ ಗನ್ ಕೊಟ್ಟು ನೋಡಲಿ. ಆಗ ನಾವೇ ಅಲ್ ಖೈದಾ ಉಗ್ರರನ್ನ ಒದ್ದೋಡಿಸಿ ಬಿಡುತ್ತೇವೆ. ಹೀಗೆ ಖಾರವಾಗಿಯೇ ಹೇಳಿಕೆ ಕೊಟ್ಟಿರುವುದು ಬೇರೆ ಯಾರೋ ಅಲ್ಲ. ಮುಸ್ಲಿಂ ಮುಖಂಡ ಉಮರ್ ಷರೀಫ್ ಹೇಳಿಕೊಂಡಿದ್ದಾರೆ.
ಅಲ್ ಖೈದಾ ನಾಯಕ ಅಯ್ಯಾನ್ ಅಲ್ ಜವಾಹಿರಿ, ಹಿಜಾಬ್‌ಗೆ ಸಂಬಂಧಿಸಿದಂತೆ ಬೆಂಬಲ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಮುಸ್ಲಿಂ ಮುಖಂಡ ಉಮರ್ ಷರೀಫ್ ಖಡಕ್ ಆಗಿಯೇ ಪ್ರತಿಕ್ರಿಯೆ ಕೊಟ್ಟು ಬಿಟ್ಟಿದ್ದಾರೆ.
ಅಲ್ ಖೈದಾ ಭಯೋತ್ಪಾದಕರು ವಿಷದ ಕ್ರಿಮಿಗಳು ಇಂತಹವರು ನಮಗೆ ಬೇಡ. ಇವರನ್ನ ಸೈತಾನ್‌ಗಳು ಅಂತಲೇ ನಾವು ಕರೆಯೋದು.ಇಂತವರು ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ನಮಗೆ ಬೆಂಬಲ ಕೊಡೊದೇ ಬೇಡವೇ ಬೇಡ ಅಂತಲೇ ಉಮರ್ ಷರೀಫ್ ವಿವರಿಸಿದ್ದಾರೆ.
PublicNext
06/04/2022 02:24 pm