ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರು ಮೂಲದ ಅರುಣ್ ಯೋಗಿರಾಜ್ ಎಂಬ ಕಲಾವಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಶಿಲ್ಪವನ್ನು ಉಡುಗೊರೆಯಾಗಿ ನೀಡಿದ್ದಾರೆ. ಉಡುಗೊರೆ ಸ್ವೀಕರಿಸಿದ ಬಳಿಕ ಟ್ವೀಟ್ ಮಾಡಿದ ಪ್ರಧಾನಿ ಮೋದಿ ಅಸಾಧಾರಣ ಶಿಲ್ಪವನ್ನು ಹಂಚಿಕೊಂಡಿದ್ದಕ್ಕಾಗಿ ಅರುಣ್ ಯೋಗಿರಾಜ್ ಅವರಿಗೆ ಧನ್ಯವಾದಗಳನ್ನು ಎಂದಿದ್ದಾರೆ.
ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿರುವ ಶಿಲ್ಪಿ ಕಲಾವಿದ ಏಕಶಿಲೆಯಲ್ಲಿ ಎರಡು ಅಡಿ ಎತ್ತರದ ಬೋಸ್ ವಿಗ್ರಹವನ್ನು ಗಿಫ್ಟ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ಪ್ರೀತಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರನ್ನು ಭೇಟಿಯಾಗುವುದು ಗೌರವದ ಸಂಗತಿ. ಈ ಬಾರಿ ನಾನು ಅವರನ್ನು ನಮ್ಮ ಹೆಸರಾಂತ ಶಿಲ್ಪಿ ಅರುಣ್ ಯೋಗಿರಾಜ್ ಮತ್ತು ನನ್ನ ಕುಟುಂಬದೊಂದಿಗೆ ಭೇಟಿಯಾದೆ. ಎಲ್ಲಾ ಸಹಾಯ ಮತ್ತು ಆಶೀರ್ವಾದಗಳಿಗಾಗಿ ಪ್ರಹ್ಲಾದ ಜೋಶಿ ಸರ್ ಅವರಿಗೆ ಧನ್ಯವಾದಗಳು. ಮತ್ತು ಈ ವರ್ಷದ ಯೋಗ ದಿನಕ್ಕೆ ಮೋದಿಜಿಯನ್ನು ಮೈಸೂರಿಗೆ ಆಹ್ವಾನಿಸಿದ್ದೇವೆ ಎಂದು ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದಾರೆ.
PublicNext
05/04/2022 10:31 pm