ಆಂಧ್ರಪ್ರದೇಶ : ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ, 13 ಹೊಸ ಜಿಲ್ಲೆಗಳನ್ನು ವರ್ಚುವಲ್ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಇದರೊಂದಿಗೆ ಆಂಧ್ರಪ್ರದೇಶ ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿದೆ.
ಸರ್ಕಾರವು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ವಿಭಾಗೀಯ ಕಂದಾಯ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳನ್ನು ನೇಮಿಸಿದೆ.
ಹೊಸ ಜಿಲ್ಲೆಗಳ ರಚನೆ ಮತ್ತು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಪುನರ್ ರಚಿಸಿ ರಾಜ್ಯ ಸರ್ಕಾರ ಶನಿವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಹೊಸ ಜಿಲ್ಲೆ ಮತ್ತು ಕೇಂದ್ರ ಕಚೇರಿ:
1. ಶ್ರೀ ಬಾಲಾಜಿ ಜಿಲ್ಲೆ – ತಿರುಪತಿ
2. ಅನ್ನಮಯ್ಯ ಜಿಲ್ಲೆ – ರಾಯಚೋಟಿ
3. ಶ್ರೀ ಸತ್ಯಸಾಯಿ ಜಿಲ್ಲೆ – ಪುಟ್ಟಪರ್ತಿ
4. ನಂದ್ಯಾಲ ಜಿಲ್ಲೆ – ನಂದ್ಯಾಲ
5. ಬಾಪಟ್ಲ ಜಿಲ್ಲೆ – ಬಾಪಟ್ಲ
6. ಪಲ್ನಾಡು ಜಿಲ್ಲೆ- ನರಸರಾವ್ ಪೇಟ
7. ಏಲೂರು ಜಿಲ್ಲೆ- ಏಲೂರು
8. ಎನ್ಟಿಆರ್ ಜಿಲ್ಲೆ – ವಿಜಯವಾಡ
9. ಅನಕಾಪಲ್ಲಿ ಜಿಲ್ಲೆ- ಅನಕಾಪಲ್ಲಿ
10. ಕಾಕಿನಾಡ ಜಿಲ್ಲೆ- ಕಾಕಿನಾಡ
11. ಕೋನ ಸೀಮಾ ಜಿಲ್ಲೆ- ಅಮಲಾಪುರಂ
12. ಮಾನ್ಯಂ ಜಿಲ್ಲೆ – ಪಾರ್ವತಿಪುರಂ
13. ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ- ಪದೇರು
PublicNext
04/04/2022 08:48 pm