ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೈಲ ದರ ಏರಿಕೆ: ಫಕೀರನನ್ನು ಪ್ರಶ್ನೆ ಕೇಳಬೇಡಿ ಎಂದ ರಾಹುಲ್ ಗಾಂಧಿ

ನವದೆಹಲಿ: ಒಂದು ವಾರದಿಂದ ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಆಗುತ್ತಲೇ ಇದೆ. ಇದರ ಹೊರೆ ನೇರವಾಗಿ ಜನಸಾಮಾನ್ಯರ ಮೇಲೆ ಬೀಳುತ್ತಲೇ ಇದೆ. ಈ ಹಿನ್ನಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ರೂಪಾಯಿಗಳಲ್ಲಿ ವಿವಿಧ ದೇಶಗಳಲ್ಲಿ ಪೆಟ್ರೋಲ್ ದರವು ಎಷ್ಟಿದೆ ಎಂಬುದರ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಫ್ಘಾನಿಸ್ತಾನದಲ್ಲಿ 66.99, ಪಾಕಿಸ್ತಾನದಲ್ಲಿ 62.38, ಶ್ರೀಲಂಕಾದಲ್ಲಿ 72.96, ಬಾಂಗ್ಲಾದೇಶದಲ್ಲಿ 78.53, ಭೂತಾನ್‍ನಲ್ಲಿ 86.28 ಮತ್ತು ನೇಪಾಳದಲ್ಲಿ ಪೆಟ್ರೋಲ್ ದರ 97.05 ರೂ. ಇದೆ. ಆದರೆ ಭಾರತದಲ್ಲಿ 101.81 ರೂ. ಇದೆ’ ಎಂದು ಟ್ವೀಟ್ ಮಾಡಿದ್ದಾರೆ.

#MehangaiMuktBharat ಹ್ಯಾಶ್ ಟ್ಯಾಗ್ ಬಳಸಿರುವ ರಾಹುಲ್ ಗಾಂಧಿ, ‘ಪಕೀರನನ್ನು ಪ್ರಶ್ನೆ ಕೇಳಬೇಡಿ, ಕ್ಯಾಮೆರಾದಲ್ಲಿ ಹಂಚಿಕೊಂಡ ಜ್ಞಾನ, ಸುಳ್ಳಿನ ಮೂಟೆ ಹೊತ್ತು ಭಾರತ ದೇಶದ ಲೂಟಿ ಮಾಡಿದರು’ ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ.

Edited By : Nagaraj Tulugeri
PublicNext

PublicNext

31/03/2022 11:02 pm

Cinque Terre

32.43 K

Cinque Terre

58

ಸಂಬಂಧಿತ ಸುದ್ದಿ