ಮಲೆಯಾಳಂ ನಟ ಮತ್ತು ಕೇರಳದ ಬಿಜೆಪಿ ಸಂಸದ ಸುರೇಶ್ ಗೋಪಿ ಅವರ ಲುಕ್ ಕಂಡು ಸ್ವತಃ ಸಭಾಪತಿ ವೆಂಕಯ್ಯ ನಾಯ್ಡು ಗೊಂದಲಕ್ಕೀಡಾಗಿ ಇದು ಮುಖವಾಡವೋ ಅಥವಾ ಬೆಳೆದ ಗಡ್ಡವೋ ಎಂದು ಕೇಳಿದ ಪ್ರಸಂಗ ಸಭಿಕರ ಮುಖದಲ್ಲಿ ನಗು ತಂದಿದೆ.ಹೌದು ಗುರುವಾರ ರಾಜ್ಯಸಭೆಯಲ್ಲಿ ತಮ್ಮ ಭಾಷಣ ಮಂಡಿಸಲು ಮುಂದಾದ ಗೋಪಿ ಅವರನ್ನು ಕಂಡ ಸಭಾಪತಿ ದಿಟ್ಟಿಸಿ ನೋಡಿ ಈ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ನಗುತ್ತಲೇ ಉತ್ತರ ನೀಡಿದ ಸುರೇಶ್ ಗೋಪಿ ಇದು ಗಡ್ಡ ಸರ್ ಮುಂದಿನ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದೇನೆ ಎಂದು ಹೇಳಿದರು. ಸಭಾಪತಿ ಅವರ ಪ್ರಶ್ನೆಯಿಂದ ಸದನದಲ್ಲಿ ನಗುವಿನ ವಾತಾವರಣ ನಿರ್ಮಾಣವಾಯಿತು.ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗದ್ದಲದ ಸದನದಲ್ಲಿ ಹೃದಯ ಸ್ಪರ್ಶಿ ಕ್ಷಣ ಎಂದು ನೆಟ್ಟಿಗರು ನಸುನಕ್ಕಿದ್ದಾರೆ.
PublicNext
31/03/2022 10:08 am