ಬೆಂಗಳೂರು: ಸುಳ್ಳು ಹೇಳೋದ್ರಲ್ಲಿ ಬಿಜೆಪಿಯವರು ನಿಸ್ಸೀಮರಾಗಿದ್ದಾರೆ. ನಾವ್ಯಾಕೆ ಹಿಜಾಬ್ ವಿವಾದ ಹುಟ್ಟು ಹಾಕೋಣ.? ವಿವಾದ ಹುಟ್ಟು ಹಾಕುವ ಅವಶ್ಯಕತೆ ಕಾಂಗ್ರೆಸ್‌ಗೆ ಇಲ್ಲ. ರಾಜಕೀಯ ಕಾರಣಕ್ಕಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.
ಇಂದು ಹಿಜಾಬ್ ಕುರಿತಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಿಖ್ಖರು ಪೇಟ ಹಾಕಿಕೊಳ್ಳೋದಿಲ್ಲವಾ ? ರಾಜಸ್ಥಾನ ಕಡೆಯಲ್ಲೆಲ್ಲಾ ಕಡ್ಡಾಯವಾಗಿ ಹಿಂದೂಗಳು ತಲೆ ಮೇಲೆ ಬಟ್ಟೆ ಹಾಕಿಕೊಳ್ತಾರೆ. ಸಿದ್ದರಾಮಯ್ಯ ಅವರು ಸ್ವಾಮೀಜಿಗಳ ವಿಚಾರವಾಗಿ ಟೀಕೆ ಮಾಡುತ್ತಿಲ್ಲ. ಮಹಿಳೆಯರು ಮೊದಲಿನಿಂದಲೂ ಸೆರಗು ಹಾಕಿಕೊಳ್ತಾರೆ. ಪಠ್ಯದಲ್ಲಿ ಏನೇನು ಸೇರಿಸುತ್ತಾರೋ ಸೇರಿಸಾಲಿ. ಸತ್ಯಾಂಶ ಏನಿದೆಯೋ ಅದನ್ನ ಉಳಿಸಿಕೊಳ್ಳಲಿ. ಇತಿಹಾಸ ತಿರುಚಿದ್ದರೆ ತೆಗೆದು ಹಾಕಲಿ ಬೇಡ ಅಂದವರು ಯಾರು? ಎಂದು ರಾಮಲಿಂಗಾರೆಡ್ಡಿ ಕಿಡಿಕಾರಿದರು.
PublicNext
25/03/2022 06:47 pm