ಬೆಂಗಳೂರು: ಮೇಕೆದಾಟು ವಿಚಾರದಲ್ಲಿ ತಮಿಳುನಾಡು ತೆಗೆದುಕೊಂಡ ನಿರ್ಧಾರವನ್ನ ಇಡೀ ಕರ್ನಾಟಕ ವಿರೋಧಿಸುತ್ತಿದೆ. ರಾಜಕೀಯ ವಲಯದಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಒಂದೇ ಒಂದು ಕಾರಣಕ್ಕೆ ಎಲ್ಲ ಪಕ್ಷದ ನಾಯಕರೂ ತಮಿಳು ನಾಡಿಗೆ ಈಗ ಸ್ಪಷ್ಟ ಖಡಕ್ ಸಂದೇಶ ಕಳಿಸಿದ್ದಾರೆ.
ನೆಲ,ಜಲ,ಭಾಷೆ,ಗಡಿ ಅಂತ ಬಂದ್ರೆ ಎಲ್ಲರೂ ಒಂದಾಗುತ್ತಾರೆ. ಅದೇ ರೀತಿನೇ ಮೇಕೆದಾಟು ವಿಚಾರದಲ್ಲಿ ತಮಿಳುನಾಡು ನಿರ್ಧಾರವನ್ನ ಬಿಜೆಪಿ ಸೇರಿದಂತೆ ಕಾಂಗ್ರೆಸ್,ಜೆಡಿಎಸ್, ಮಾತಿನ ಚಾಟಿ ಮೂಲಕವೇ ವಿಧಾನಸಭೆಯಿಂದಲೇ ಖಡಕ್ ಸಂದೇಶ ಕೊಟ್ಟಿದ್ದಾರೆ.
ಮಂಗಳವಾರದ ಶೂನ್ಯ ವೇಳೆಯಲ್ಲಿ ತಮಿಳುನಾಡು ವಿಧಾನಸಭೆ ನಿರ್ಧಾರ ಪ್ರಸ್ತಾಪ ಆಗಿದೆ. ತಮಿಳುನಾಡು ಗದಾ ಪ್ರಹಾರ ಸಹಿಸೋದಿಲ್ಲ. ಮೇಕೆದಾಟು ಯೋಜನೆ ಜಾರಿಗೆ ತಂದೇ ತರುತ್ತೇವೆ. ನಮ್ಮ ಯೋಜನೆ ಬಗ್ಗೆ ನಿರ್ಣಯ ಮಾಡಲು ಅವರಿಗೆ ಹಕ್ಕು ಇಲ್ಲೇ ಇಲ್ಲ ಅಂತಲೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.ಯಡಿಯೂರಪ್ಪ ಕೂಡ ಇದಕ್ಕೆ ಧ್ವನಿ ಕೂಡಿಸಿದರು. ತಮಿಳುನಾಡಿನ ಈ ನಿರ್ಣಯಕ್ಕೆ ಮೂರು ಪಕ್ಷದ ನಾಯಕರೂ ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಖಂಡನಾ ನಿರ್ಣಯ ಕೈಗೊಂಡು ಒಕ್ಕೊರಲಿನ ನಿಲುವಿಗೆ ಬಂದರು.
PublicNext
23/03/2022 10:12 am