ಚಂಡೀಗಢ: ಪಂಜಾಬ್ ಸಿಎಂ ಭಗವಂತ್ ಮಾನ್ ಸಂಪುಟ ಸೇರಿದ 11 ಸಚಿವರ ಪೈಕಿ 7 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಆ 7 ರಲ್ಲಿ ನಾಲ್ವರ ವಿರುದ್ಧ ಗಂಭೀರ ಆರೋಪಗಳಿದೆ ಎಂದು ಚುನಾವಣಾ ಹಕ್ಕುಗಳ ಗುಂಪು ಎಡಿಆರ್ ಹೇಳಿದೆ. ಹೌದು ಪಂಚರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದಿಂದ ಗೆದ್ದು ಬೀಗಿದ ಭಗವಂತ್ ಮಾನ್ ಸದ್ಯ ನೂತನ ಸಂಪುಟ ರಚನೆ ಮಾಡಿದ್ದಾರೆ.
11 ಜನರ ಈ ಸಂಪುಟದಲ್ಲಿ 7 ಜನರ ವಿರುದ್ದ ಅಪರಾಧಿಕ ಪ್ರಕರಣಗಳಿವೆ.ಎಡಿಆರ್ ಪ್ರಕಾರ 7 ಸಚಿವರು (ಶೇ.64 ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇರುವುದನ್ನು ಘೋಷಿಸಿಕೊಂಡಿದ್ದಾರೆ. 11 ಮಂದಿಯ ಪೈಕಿ ನಾಲ್ವರು (ಶೇ.36 ರಷ್ಟು ಮಂದಿ) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. 11 ಸಚಿವರ ಪೈಕಿ 9 ಮಂದಿ ಕರೋಡ್ ಪತಿಗಳಾಗಿದ್ದು ಅವರ ಸರಾಸರಿ ಆಸ್ತಿ 2.87 ಕೋಟಿ ರೂಪಾಯಿಗಳಾಗಿವೆ.
ಆಮ್ ಆದ್ಮಿ ಶಾಸಕರು ಪಂಜಾಬ್ ಸಚಿವರಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು.
PublicNext
22/03/2022 03:41 pm