ಬೆಂಗಳೂರು: ಉಕ್ರೇನ್‌ನಲ್ಲಿ ಸರ್ಕಾರದ ಸ್ಥಳಾಂತರ ಪ್ರಯತ್ನಗಳನ್ನ ಟೀಕಿಸಿದ್ದ ವಿದ್ಯಾರ್ಥಿಗಳ ಒಂದು ವರ್ಗವನ್ನು ಗುರಿಯಾಗಿಸಿಕೊಂಡ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.
ಆಪರೇಶನ್ ಗಂಗಾ ಪೂರ್ಣಗೊಂಡ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಾನು ಆರೋಪಗಳನ್ನು ಮಾಡಿದ ಕೆಲವೇ ವಿದ್ಯಾರ್ಥಿಗಳನ್ನು ಕೇಳಲು ಬಯಸುತ್ತೇನೆ. ಯಾವುದೇ ಕೆಲಸ ಮಾಡದಿದ್ದರೆ ಉಕ್ರೇನ್‌ನಿಂದ 19,000 ವಿದ್ಯಾರ್ಥಿಗಳು ಹಿಂತಿರುಗಲು ಸಾಧ್ಯವೇ? ಅವರು ಸ್ಪೈಡರ್ ಮ್ಯಾನ್ ಅಥವಾ ಸೂಪರ್ ಮ್ಯಾನ್‌ನಂತೆ ಹಾರಿ ಹೊರ ಬರಲಿಲ್ಲ" ಎಂದು ಗುಡುಗಿದರು.
"19,000 ವಿದ್ಯಾರ್ಥಿಗಳಲ್ಲಿ ನಾವು ಕೇವಲ ಒಬ್ಬ ನವೀನ್ ಅವರನ್ನು ಕಳೆದುಕೊಂಡಿದ್ದೇವೆ. ಸ್ಥಳಾಂತರ ಸರಿಯಾಗಿ ನಡೆಯದಿದ್ದರೆ ನಾವು ಹೆಚ್ಚು ನವೀನ್‌ರನ್ನ ಕಳೆದುಕೊಳ್ಳಬೇಕಿತ್ತು. ಪ್ರಧಾನಿ ಮೋದಿ ಮತ್ತು ಸರ್ಕಾರದ ಪ್ರಯತ್ನಗಳಿಂದಾಗಿ ಅದು ಸಂಭವಿಸಲಿಲ್ಲ. ಇದನ್ನು ನೋಡುವ ಪ್ರಾಮಾಣಿಕತೆ ಜನರಿಗೆ ಇರಬೇಕು. ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿದ್ದರು ಎಂದು ಹೇಳಿದರು.
"ಸರ್ಕಾರ ಏನೂ ಮಾಡದಿದ್ದರೆ, ಹಿಂತಿರುಗಿ ಬಂದು ಆ ಎಲ್ಲಾ ವಿಷಯಗಳನ್ನು ಹೇಳಿದ ವಿದ್ಯಾರ್ಥಿಗಳು, ತಮ್ಮ ಫೋನ್‌ನಲ್ಲಿ ವಿಮಾನ ಟಿಕೆಟ್‌ಗಳನ್ನ ಕಾಯ್ದಿರಿಸಿದ್ದಾರೆಯೇ? ಅಥವಾ ಅವರು ಭಾರತ ಸರ್ಕಾರ ಕಳುಹಿಸಿದ ವಿಶೇಷ ವಿಮಾನಗಳಲ್ಲಿ ಬಂದರೇ? ಯಾರೂ ಸುಳ್ಳು ಹೇಳಬೇಕಿಲ್ಲ. ದೇಶದ ಬಗ್ಗೆ ಕೆಲವು ಮೂಲಭೂತ ಸೌಜನ್ಯ ಇರಬೇಕು. ಇನ್ನು ಶೇ. 99 ವಿದ್ಯಾರ್ಥಿಗಳು ಮತ್ತು ಪೋಷಕರು ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ ಎಂದರು.
PublicNext
12/03/2022 10:59 pm