ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋವಾದಿಂದ ಬರಿಗೈಯಲ್ಲಿ ವಾಪಸ್ ಆದ ರೆಸಾರ್ಟ್ ಎಕ್ಸ್‌ಪರ್ಟ್ ಡಿಕೆಶಿ

ಬೆಂಗಳೂರು: ಐದು ರಾಜ್ಯಗಳ ಚುನಾವಾಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ ಉಂಟಾಗಿದೆ. ಈ ಹಿಂದೆ ಆಡಳಿತ ನಡೆಸಿದ್ದ ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದೆ.

ಪಂಜಾಬ್, ಗೋವಾ, ಉತ್ತರಾಖಂಡ್, ಮಣಿಪುರದಲ್ಲಿನ ಸೋಲಿನಿಂದ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಕಂಗಲಾಗಿದ್ದಾರೆ. ಈ ಆತಂಕ ಕರ್ನಾಟಕದ‌ ನಾಯಜರಲ್ಲೂ ಕಾಣುತ್ತಿದೆ. ಪಂಜಾಬ್ ಕಾಂಗ್ರೆಸ್‌ನಲ್ಲಿರುವ ನಾಯಕರ ಒಳಜಗಳ, ಬಗೆಹರಿಯದ ಭಿನ್ನಮತಗಳು, ಬಣ ರಾಜಕೀಯ, ಜನವಿರೋಧಿ ಆಡಳಿತ‌ ಸೇರಿ ಹಲವು ಕಾರಣಗಳಿಂದ ಈ ಸೋಲು ಉಂಟಾಗಿದೆ ಎಂಬುದು ರಾಜಕೀಯ ಪರಿಣತರ ವಾದ. ಸದ್ಯ ಈ ಸ್ಥಿತಿ ಕರ್ನಾಟಕದಲ್ಲೂ ಬರಬಹುದೆಂಬ ಆತಂಕ ಕರ್ನಾಟಕದ ಕಾಂಗ್ರೆಸ್ ಶಾಸಕರಲ್ಲಿ ಕಾಡುತ್ತಿದೆ.

ಇನ್ನು ಗೋವಾ ರಾಜ್ಯದಲ್ಲಿ ಅಧಿಕಾರ ಸೂತ್ರ ಹಿಡಿಯಲೇಬೇಕೆಂದು ಕೊನೆ ಕ್ಷಣದವರೆಗೂ ತೀವ್ರ ಕಸರತ್ತು ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ ಸೋಲಿನ ಬಿಸಿ ತಾಕಿದೆ. ಮತದಾನ ಪ್ರಕ್ರಿಯೆ ನಂತರ ರಾಜಕೀಯ ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಗಳ‌ನ್ನು ರೆಸಾರ್ಟ್‌ನಲ್ಲಿ‌ ಇರಿಸಿದ್ದರು. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆರೋಪಿಸಿದ್ದರು.

Edited By : Nagaraj Tulugeri
PublicNext

PublicNext

10/03/2022 04:00 pm

Cinque Terre

51.05 K

Cinque Terre

30

ಸಂಬಂಧಿತ ಸುದ್ದಿ