ಲಕ್ನೋ: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರ ಬೀಳಲಿದ್ದು, ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಹಸ್ತಿನಾಪುರದ ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್ ಹಿನ್ನಡೆ ಅನುಭವಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಹಸ್ತಿನಾಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅರ್ಚನಾ ಗೌತಮ್ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ಮತದಾರ ಬಂಧುಗಳು ಅರ್ಚನಾ ಗೌತಮ್ಗೆ ಹೆಚ್ಚಿನ ಒಲವು ತೋರಿಲ್ಲ. ನಟಿ, ರೂಪದರ್ಶಿಯೂ ಆಗಿರುವ ಅರ್ಚನಾ ಗೌತಮ್ 2014ರಲ್ಲಿ 'ಉತ್ತರ ಪ್ರದೇಶ ಸುಂದರಿ'ಯಾಗಿ ಹೊರಹೊಮ್ಮಿದ್ದು, ಇದಾದ ಬಳಿಕ ಮಿಸ್ ಬಿಕಿನಿ ಇಂಡಿಯಾ, ಮಿಸ್ ಬಿಕಿನಿ ಯೂನಿವರ್ಸ್ ಇಂಡಿಯಾ ವಿಜೇತೆಯಾಗಿ ಹೊರಹೊಮ್ಮಿದ್ದಾರೆ.
PublicNext
10/03/2022 12:22 pm