ಉತ್ತರ ಪ್ರದೇಶ: ಪಂಚರಾಜ್ಯಗಳ ಚುನಾವಣೆಯ ಭವಿಷ್ಯ ಇಂದು ಹೊರ ಬೀಳುತ್ತಿದೆ.ಅದಕ್ಕೂ ಮೊದಲೇ ಸಂಸ್ಕೃತ ವಿಶ್ವ ವಿದ್ಯಾಲಯದ ಜ್ಯೋತಿಷಿ ಅಶ್ವಿನಿ ಪಾಂಡೆ,ಉತ್ತರ ಪ್ರದೇಶದ ಮುಂದಿನ ಸಿಎಂ ಯೋಗಿ ಆದಿತ್ಯನಾಥ್ ಅಂತಲೇ ಭವಿಷ್ಯ ನುಡಿದಿದ್ದಾರೆ.
ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದ ಬಗೆಗಿನ ಕುತೂಹಲ ಸಿಕ್ಕಾಪಟ್ಟೆ ಇದೆ. ಎಲ್ಲರ ಕಣ್ಣುಗಳೂ ಈ ಅತಿ ಹೆಚ್ಚು ಕ್ಷೇತ್ರ ಇರೋ ರಾಜ್ಯದ ಮೇಲೆನೆ ಇದೆ. ಹೀಗಿರೋವಾಗಲೇ ಜ್ಯೋತಿಷಿ ಅಶ್ವಿನಿ ಪಾಂಡೆ ಈ ರಾಜ್ಯದ ಫಲಿತಾಂಶ ಬರೋ ಮುಂಚೇನೆ ಭವಿಷ್ಯವನ್ನ ಹೇಳಿ ಬಿಟ್ಟಿದ್ದಾರೆ.
ಇಲ್ಲಿರೋ 403 ಸ್ಥಾನಗಳ ಪೈಕಿ 223ರಿಂದ 248 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಸಮಾಜವಾದಿ ಪಕ್ಷ 140 ಸ್ಥಾನಗಳನ್ನ ತನ್ನದಾಗಿಸಿಕೊಳ್ಳುತ್ತದೆ. ವಿಕ್ರಮ ಶಕೆ ಹಿಂದೂ ಪಂಚಾಂಗದ ರೀತ್ಯ 2078 ವರ್ಷ ಜಾರಿಯಲ್ಲಿದೆ. ಈ ಸಂವತ್ಸರಕ್ಕೆ ಮಂಗಳ ಗ್ರಹ ಅಧಿಪತಿಯಾಗಿದೆ. ಗ್ರಹಗತಿಗಳು ಸಿಎಂ ಯೋಗಿ ಪರವಾಗಿಯೇ ಇವೆ ಎಂದು ಜ್ಯೋತಿಷಿ ಅಶ್ವಿನಿ ಪಾಂಡೆ ಹೇಳಿದ್ದಾರೆ.
PublicNext
10/03/2022 08:10 am